ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರುದ್ರಭೂಮಿ ಅಭಿವೃದ್ಧಿಗೆ ಆಗ್ರಹ

Rashmi Kasaragodu
Updated On : 11 Jul 2014, 1:21 am

ಮೈಸೂರು: ವಿದ್ಯಾರಣ್ಯಪುರಂ ವೀರಶೈವ ರುದ್ರಭೂಮಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಮೈಸೂರು ನಗರ ವೀರಶೈವ ಧರ್ಮ ಸಹಾಯ ಸಂಘ ಆಗ್ರಹಿಸಿದೆ. ರುದ್ರಭೂಮಿಯಲ್ಲಿ ಸ್ಥಳಾಭಾವ ಇರುವುದರಿಂದ 30 ವರ್ಷಗಳ ಹಿಂದೆ ನಿರ್ಮಾಣವಾದ ಸಮಾಧಿಯನ್ನು ತೆಗೆಸಬೇಕು ಎಂದು ಸಂಘದ ಸಂಸ್ಥಾಪಕ ಗೌರವ ಅಧ್ಯಕ್ಷ ಛಡಿಮರಿ ಸಿದ್ದಲಿಂಗದೇವರು ಮತ್ತು ಪ್ರಧಾನ ಕಾರ್ಯದರ್ಶಿ ತಾಯೂರು ವಿಠಲಮೂರ್ತಿ ಒತ್ತಾಯಿಸಿದ್ದಾರೆ. ಸ್ಥಳ ಅಭಾವ ಇರುವುದರಿಂದ ಸಮಾಧಿ ಕಟ್ಟುವುದನ್ನು ನಿಷೇಧಿಸಬೇಕು, ಶವ ಸಂಸ್ಕಾರಕ್ಕೆ ಬರುವ ಸಾರ್ವಜನಿಕರು ಕೂರಲು 12 ಬಣ್ಣದ ಕಲ್ಲು ಬೆಂಚುಗಳನ್ನು ಹಾಕಿಸಬೇಕು, ರುದ್ರಭೂಮಿಗೆ ಶವ ಸಂಸ್ಕಾರಕ್ಕೆ ಹೋಗುವ ದಾರಿಯೂ ಒತ್ತುವರಿ ಆಗಿ ಕಿರಿದಾಗಿದೆ. ದಾರಿಯಲ್ಲಿ ಕುರಿ, ದನಗಳನ್ನು ಕಟ್ಟಿಕೊಂಡು ಶವ ಸಂಸ್ಕಾರಕ್ಕೆ ಹೋಗುವ ವಾಹನಗಳಿಗೆ ತುಂಬಾ ತೊಂದರೆಯಾಗಿದ್ದು, ಸ್ವಚ್ಛತೆ ಕಾಪಾಡಬೇಕಿದೆ ಎಂದು ನಗರ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಪಾಲಿಕೆ ಸದಸ್ಯರಾದ ಸುನಿಲ್, ಉಮಾಮಣಿ, ಸುನಿಲ್ ಕುಮಾರ್, ಸಂಘದ ಮುಖಂಡರಾದ ಪಿ. ರುದ್ರಸ್ವಾಮಿ, ಶಿವರುದ್ರಪ್ಪ, ಬಸವರಾಜು, ಸಿ.ಎಸ್. ನಂಜುಂಡಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement