ಲಯನ್ಸ್ನಿಂದ ಉತ್ತಮ ಸೇವೆ
ಎಚ್.ಡಿ. ಕೋಟೆ: ಉತ್ತಮ ಸಮಾಜ ಕಟ್ಟಲು ಹಲವು ಸಂಸ್ಥೆಗಳು ಮುಂದೆ ಬಂದಿದ್ದು ಅಂತಹ ಸಂಸ್ಥೆಗಳಲ್ಲಿ ಲಯನ್ಸ್ ಸಂಸ್ಥೆಯು ಒಂದಾಗಿದೆ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಜಿ.ಪಿ.ದಿವಾಕರ್ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಮಂಜುನಾಥ ಫಂಕ್ಷನ್ ಹಾಲ್ನಲ್ಲಿ ನಡೆದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆಯು ತಾಲೂಕಿನಲ್ಲಿ ಕಡುಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಸಮವಸ್ತ್ರ ವಿತರಣೆ, ಪಲ್ಸ್ ಪೋಲಿಯೋ ಕಾರ್ಯಕ್ರಮಗಳಲ್ಲಿ ಸಹಭಾಗಿತ್ವದಂತ ಮಹತ್ ಕಾರ್ಯಗಳಲ್ಲಿ ಭಾಗಿಯಾಗಿದ್ದು ಉತ್ತಮ ಸೇವೆಯಲ್ಲಿ ತೊಡಗಿದೆ ಎಂದರು.
ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಟಿ.ವೀರಪ್ಪ ಮಾತನಾಡಿ, ನನ್ನ ಅವಧಿಯಲ್ಲಿ ಸಂಸ್ಥೆಯನ್ನು ಜಿಲ್ಲೆಗೆ ಮಾದರಿ ಸಂಸ್ಥೆಯನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ. ಪ್ರತಿಯೊಬ್ಬ ಮನುಷ್ಯನಲ್ಲಿ ನಾಯಕತ್ವದ ಗುಣ ಇರುತ್ತದೆ. ಆದರೆ ಇಂದು ಆ ನಾಯಕತ್ವ ನನಗೆ ಒಲಿದು ಬಂದಿದ್ದು ಮುಂದಿನ 1 ವರ್ಷಗಳ ಕಾಲ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆ ಪ್ರಗತಿ ಮಾಡಲಾಗುವುದು ಎಂದರು.
ಉಪಾಧ್ಯಕ್ಷರಾಗಿ ಡಿ.ಆರ್.ಮಹೇಶ್, ಪಿ.ನಾಗರಾಜಪ್ಪ, ಕಾರ್ಯದರ್ಶಿಯಾಗಿ ಸುರೇಂದ್ರ ಬಿ.ಗೌಡ, ಖಜಾಂಚಿ ಜಿ.ಎನ್.ನಾರಾಯಣಗೌಡ, ನಿರ್ದೇಶಕರಾಗಿ ಎಸ್.ಎನ್. ನಾಗರಾಜು, ಹರೀಶ್ ಬಿ.ಎಚ್.ಗೌಡ ಪ್ರಮಾಣ ವಚನ ಸ್ವಿಕರಿಸಿದರು. ನಿಕಟಪೂರ್ವ ಅಧ್ಯಕ್ಷ ಬೆಳಗನಹಳ್ಳಿ ಬಸವರಾಜು, ಡಿ.ಆರ್.ಮಹೇಶ್, ಸುರೇಂದ ಡಿ.ಗೌಡ, ಜಿ.ಪಿ. ದಿವಾಕರ್, ವಿ.ನಾಗರಾಜು, ವೈ.ಟಿ. ಮಹೇಶ್, ಸಿ.ಎನ್.ನಾಗಣ್ಣ, ಎಸ್.ಎನ್. ರಂಗೇಗೌಡ, ಎನ್.ರಂಗಸ್ವಾಮಿ, ನಟರಾಜು ಇದ್ದರು.