ಇಂದು ಸ್ಟ್ಯಾನ್ಲಿ ಪಾರ್ಕರ್ಸ್ ಸಂಗೀತ ಶಾಲೆ ಉದ್ಘಾಟನೆ
ಮೈಸೂರು: ಸ್ಟ್ಯಾನ್ಲಿ ಪಾರ್ಕರ್ಸ್ ಸ್ಕೂಲ್ ಆಫ್ ಮ್ಯೂಸಿಕ್ನ ಉದ್ಘಾಟನಾ ಸಮಾರಂಭ ಜು. 12ರ ಸಂಜೆ 5.30ಕ್ಕೆ ದಟ್ಟಗಳ್ಳಿ 3ನೇ ಹಂತದ ತಿರುಮಲ ಪ್ಲಾಜಾದಲ್ಲಿ ನಡೆಯಲಿದೆ. ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ವಾಸು ಉದ್ಘಾಟಿಸುವರು. ಮೈಕ್ರೋ ಲ್ಯಾಬ್ಸ್ನ ಪ್ರಧಾನ ವ್ಯವಸ್ಥಾಪಕ ಬಿ.ವಿ. ರಮೇಶ್ ಶಾಲಾ ನಾಮಫಲಕ ಅನಾವರಣಗೊಳಿಸುವರು. ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ ಜ್ಯೋತಿ ಬೆಳಗಿಸುವರು. ಮಾಜಿ ಶಾಸಕ ಎಸ್. ಬಾಲರಾಜ್ ಸಂಗೀತ ಪರಿಕರ ಉದ್ಘಾಟಿಸುವರು ಎಂದು ಶಾಲೆಯ ಮುಖ್ಯಸ್ಥ ಸ್ಟ್ಯಾನ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲಕ್ಷ್ಮೀಪುರಂ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿದ್ದರಾಜು, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಚರ್ಮರೋಗ ತಜ್ಞ ಡಾ. ಸುಧೀಂದ್ರನ್, ಪ್ರವೀಣ್ಕುಮಾರ್ ಭಾಗವಹಿಸುವರು.