ಬೈಕ್ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಮೈಸೂರು: ಮನೆ ಆವರಣದಲ್ಲಿ ನಿಲ್ಲಿಸಿದ್ದ ಮೂರು ಸ್ಕೂಟರ್ಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಕನಕಗಿರಿಯಲ್ಲಿ ಶುಕ್ರವಾರ ನಡೆದಿದೆ.
ಕನಕಗಿರಿ 4ನೇ ಕ್ರಾಸ್ನ ಬಿ.ಆರ್.ರಾಜಶೇಖರ್ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ 2.30ರ ಸುಮಾರಿನಲ್ಲಿ ಎರಡು ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಮಲಗಿದ್ದ ರಾಜಶೇಖರ್ ಕುಟುಂಬದವರು ಬೆಂಕಿ ಮತ್ತು ಹೊಗೆಯನ್ನು ಕಂಡು ಹೊರ ಬಂದಾಗ ಸ್ಕೂಟರ್ಗಳಿಗೆ ಬೆಂಕಿ ಹಚ್ಚಿರುವುದು ತಿಳಿದುಬಂದಿದೆ. ಕೂಡಲೆ ಸಮೀಪದ ನಿವಾಸಿಗಳ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ. ಇದೆ ರಸ್ತೆಯಲ್ಲಿ ಸುಮಾರು 40 ಬೈಕ್ಗಳನ್ನು ಹೊರಗೆ ನಿಲ್ಲಿಸಲಾಗುತ್ತದೆ. ಆದರೆ ರಾಜಶೇಖರ್ ಅವರ ಮನೆಯ ಬೈಕ್ಗೆ ಬೆಂಕಿ ಹಚ್ಚಿರುವುದು ಉದ್ದೇಶ ಪೂರ್ವಕ ಕೃತ್ಯ ಎಂದು ಶಂಕಿಸಲಾಗಿದೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ