ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯಕ್ಷಕಲೆಗೆ ಡಿಪ್ಲೋಮಾ ಕೋರ್ಸ್

Rashmi Kasaragodu
Updated On : 12 Jul 2014, 12:50 pm

ಮೈಸೂರು: ಯಕ್ಷಗಾನ ಕಲೆಯ ಕಲಿಕೆಗೆ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಪ್ರೊ.ಸರ್ವಮಂಗಳಾ ಶಂಕರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಇನ್ನೋವೇಟಿವ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಮೂರು ದಿನಗಳ ಚಿಟ್ಟಾಣಿ ಯಕ್ಷೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ವಿವಿಯು ಎಲ್ಲ ಕಲೆಗಳಂತೆ ರಾಜ್ಯದ ಕಲೆಗಳಾದ ಕಥಾ ಕೀರ್ತನೆ, ಗಮಕ ಹಾಗೂ ಯಕ್ಷಗಾನವನ್ನು ಬೆಳೆಸುವ ಉದ್ದೇಶ ಹೊಂದಿದೆ. ಅಂತೆಯೇ ಯಕ್ಷಗಾನ ಕಲೆಯ ಕಲಿಕೆಗಾಗಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುವುದು ಎಂದ ಅವರು, ಯಕ್ಷಗಾನ ಕುರಿತು ತೌಲನಿಕ ಅಧ್ಯಯನ ಹಾಗೂ ಸಂಶೋಧನೆ ನಡೆಯಬೇಕು ಎಂದರು. ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಮಳಲಿ ವಸಂತಕುಮಾರ್, ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎನ್ ಪಂಜಾಜೆ ಹಾಗೂ ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಅವರನ್ನು ಯಕ್ಷಗಾನ ಚಿಂತಕ ಡಾ.ಕಬ್ಪಿನಾಲೆ ವಸಂತ ಭಾರದ್ವಾಜ ಸನ್ಮಾನಿಸಿದರು.
ಸಂಸ್ಕೃತಿ ಪೋಷಕ ಕೆ.ರಘುರಾಂ, ಉದ್ಯಮಿ ನಾರಾಯಣ ವಿ.ಹೆಗಡೆ ಮುಖ್ಯ ಅತಿಥಿಗಳಾಗಿದ್ದರು. ಬೆಳ್ಳಿಪ್ಪಾಡಿ ಯಕ್ಷ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ.ಬೆಳ್ಳಿಪ್ಪಾಡಿ ಸತೀಶ್ ರೈ ಅಧ್ಯಕ್ಷತೆ ವಹಿಸಿದ್ದರು.
ಇನ್ನೋವೇಟಿವ್ ಅಧ್ಯಕ್ಷ ಜಿ.ಎಸ್.ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ಹೇರಂಬ ಆರ್ ಭಟ್ಟ ನಿರೂಪಿಸಿದರು. ಖಜಾಂಚಿ ಡಾ.ಎಸ್.ಎನ್.ಹೆಗ್ಡೆ, ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು. ನಂತರ ಭೂ ಕೈಲಾಸ ಯಕ್ಷಗಾನ ಪ್ರದರ್ಶನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement