ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಹುಲ್ ಶಾಲೆಯಲ್ಲಿ ಬುದ್ಧ ಜಯಂತಿ

Rashmi Kasaragodu
Updated On : 12 Jul 2014, 12:47 pm

ಮೈಸೂರು: ರಮಾಬಾಯಿನಗರದಲ್ಲಿರುವ ರಾಹುಲ್ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುದ್ಧ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ನಾಟಕ ಅಕಾಡೆಮಿಯ ನಿವೃತ್ತ ರಿಜಿಸ್ಟರ್ ಎ.ಎಸ್.ನಾಗರಾಜು ಮಾತನಾಡಿ, ಭಗವಾನ್ ಗೌತಮಬುದ್ಧ ಪ್ರಜ್ಞೆಯನ್ನು ಸಮಾಜಕ್ಕೆ ಮೊದಲು ಪರಿಚಯಿಸಿದ ಮಹಾಪುರುಷ. ಜನಸಾಮಾನ್ಯರಲ್ಲಿ ಪ್ರಜ್ಞೆ ಇರುವುದಿಲ್ಲವೋ ಅದು ಕುರುಡು ಸಮಾಜ ಎಂದು ಹೇಳಿದರು. ಆರ್ಎಸ್ಎಸ್ನ ದಕ್ಷಿಣ ಪ್ರಾಂತ ಸಂಚಾಲಕ ಹಾಗೂ ಸಂಸ್ಥೆಯ ಅಧ್ಯಕ್ಷ ಮ.ವೆಂಕಟರಾಮು ಅಧ್ಯಕ್ಷತೆ ವಹಿಸಿದ್ದರು. ಮಾತಾ ಅಮೃತಾನಂದಮಯಿ ಮಠದ ರಾಮಕೃಷ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪರಿಷತ್ ಸದಸ್ಯರಾದ ಪಟೇಲ್ ಜವರೇಗೌಡ,  ಸಿ.ಜವರಪ್ಪ, ಸಿ.ಹರಕುಮಾರ್, ಕಾಶಿ ವಿಶ್ವನಾಥಶೆಟ್ಟಿ, ಪರಶಿವಮೂರ್ತಿ, ನಾರಾಯಣ, ಶಿವಕುಮಾರ್ ಮಾತನಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement