ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಳೆ ಇಲ್ಲದೆ ಒಣಗುತ್ತಿರುವ ಬೆಳೆ

Rashmi Kasaragodu
Updated On : 13 Jul 2014, 1:09 am

ಎಚ್.ಡಿ. ಕೋಟೆ: ತಾಲೂಕಿನಾದ್ಯಂತ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿದ್ದು, ಬರದ ಛಾಯೆ ಆವರಿಸಿದೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಅವರು, ತಾಲೂಕಿನಲ್ಲಿ ಬಹುಪಾಲು ರೈತರು ಹತ್ತಿಯನ್ನೇ ನಂಬಿ ಬಿತ್ತನೆ ಮಾಡಿದ್ದಾರೆ. ಈಗ ಮಳೆ ದಿಢೀರ್ ಕೈಕೊಟ್ಟಿದ್ದು ರೈತರು ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದಾರೆ. ಕೃಷಿ ಇಲಾಖೆಯಲ್ಲಿ ದ್ವಿದಳ ಧಾನ್ಯಗಳಿಗೆ ವಿಮೆಗೆ ಅವಕಾಶವಿದ್ದು ಇದರ ಪ್ರಯೋಜನವನ್ನು ಈಗಲಾದರೂ ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.  ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ ಮಾತನಾಡಿ, ವಿಮೆಗೆ ಜು.21 ರವರೆಗೆ ಅರ್ಜಿಗಳನ್ನು ವಿತರಿಸಿದ್ದು ವಿವಿಧ ಬ್ಯಾಂಕ್ನವರ ಸಹಯೋಗದಲ್ಲಿ ಕೃಷಿ ಇಲಾಖೆಯಲ್ಲೇ ದ್ವಿದಳ ಧಾನ್ಯಗಳಿಗೆ ವಿಮೆ ಮಾಡಿಸಲಾಗುತ್ತಿದೆ. ರಾಗಿಗೆ ಅರ್ಜಿ ಶುಲ್ಕ 334 ಹಾಗೂ ಮೆಕ್ಕೆಜೋಳಕ್ಕೆ 703 ಪಡೆಯುತ್ತಿದ್ದು ಆಯಾ ಗ್ರಾಪಂ ಸಹಯೋಗದಲ್ಲಿ ಸರ್ವೇ ನಡೆಸಿ ನಷ್ಟವಾಗಿರುವ ಬೆಳೆಗೆ ವಿಮೆ ನೀಡಲಾಗುವುದು ಎಂದರು. ತಾಲೂಕಿನ ವಡ್ಡರಗುಡಿ, ಬೆಳಗನಹಳ್ಳಿ, ಮಲಾರ ಕಾಲೋನಿ ಸೇರಿದಂತೆ ಇತ್ಯಾದಿ ಗ್ರಾಮಗಳಿಗೆ ಸಂಚರಿಸಿ ಅಲ್ಲಿನ ಬೆಳೆಗಳನ್ನು ವೀಕ್ಷಿಸಿದರು. ಮಲಾರ ಪುಟ್ಟಯ್ಯ, ನಾಗಣ್ಣ ಇದ್ದರು.


ಪದಾಧಿಕಾರಿಗಳ ಆಯ್ಕೆ
ಮೈಸೂರು: ಮೈಸೂರು ಕರಾಟೆ ಅಸೋಸಿಯೇಷನ್ನ 2014-15ನೇ ಸಾಲಿನ ಪದಾಧಿಕಾರಿಗಳಾಗಿ ಅರುಣ್ಮಾಚಯ್ಯ (ಅಧ್ಯಕ್ಷರು), ಎಂ.ಮಹದೇವಸ್ವಾಮಿ (ಅಧ್ಯಕ್ಷರು), ಎಂ.ಬಿ.ಚಿದಾನಂದ (ಕಾರ್ಯದರ್ಶಿ), ನಾಗರಾಜು (ಉಪಾಧ್ಯಕ್ಷರು), ದೀಪಕ್ ಕುಮಾರ್ (ಸಹ ಕಾರ್ಯದರ್ಶಿ), ಎನ್.ಶಂಕರ (ಖಜಾಂಚಿ), ಶಿವದಾಸ್, ಸಿದ್ದರಾಜು, ಸುನಿಲ್ಕುಮಾರ್, ಅಜೀಜ್ಖಾನ್, ಆರ್. ನವೀನ್ಕುಮಾರ್ (ನಿರ್ದೇಶಕರು) ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement