ವಿವಿಧ ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ಮೈಸೂರು: ಬಸವ ಬಳಗ ಸೇವಾ ಟ್ರಸ್ಟ್ ಕಳೆದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವೀರಶೈವ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದ್ದು, ಅರ್ಹರು ಜು.20 ರೊಳಗೆ ನಂ.1490/ 706, ವೀರಭದ್ರೇಶ್ವರ ನಿಲಯ, ಪ್ರಶಾಂತನಗರ, ಬೋಗಾದಿ ಎರಡನೇ ಹಂತ, ಮೈಸೂರು ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಮೊ. 94482 08317 ಸಂಪರ್ಕಿಸಬಹುದು. ಹೆಬ್ಬಾರ್ ವೈಷ್ಣವ ಉಪಸಭಾದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದ್ದು, ವಿದ್ಯಾರ್ಥಿ ತಂದೆ- ತಾಯಿಗಳಲ್ಲೊಬ್ಬರು ಹೆಬ್ಬಾರ್ ಅಯ್ಯಂಗಾರ್ ಆಗಿರಬೇಕು. ಸುಂದರರಾಜ್, ಶ್ರೀರಾಮ ಮಂದಿರ, ಕೃಷ್ಣಮೂರ್ತಿಪುರಂ. ದೂ.0821- 2330400. ಕರ್ನಾಟಕ ಕಾವಲುಪಡೆಯಿಂದ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 120 ಕ್ಕಿಂತ ಹೆಚ್ಚು ಅಂಕ ಗಳಿಸಿರುವ, ಪಿಯುಸಿಯಲ್ಲಿ 100ಕ್ಕೆ 95ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೊ 94485 28625 ಸಂಪರ್ಕಿಸಿ.