ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಸ್ತ್ರಚಿಕಿತ್ಸೆ ನೇರ ದೃಶ್ಯಾವಳಿ ವೀಕ್ಷಿಸಿದ ವೈದ್ಯರು

Rashmi Kasaragodu
Updated On : 13 Jul 2014, 1:06 am

ಮೈಸೂರು: ಅಪ್ಲಿಕೇಷನ್ ಪ್ರೋಗ್ರಾಮ್ಮಿಂಗ್ ಇಂಟರ್ಫೇಸ್ ಜಿಲ್ಲಾ ಶಾಖೆ ಮತ್ತು ಅಡಿಕ್ಷನ್ ಸೆವೇರಿಟಿ ಇಂಡೆಕ್ಸ್ ಜಿಲ್ಲಾ ಶಾಖೆಯಿಂದ ನಗರದ ವಿಕ್ರಂ ಜ್ಯೋತ್ ಆಸ್ಪತ್ರೆಯಲ್ಲಿ ಏರ್ಪಡಿಸಿರುವ ಗ್ಯಾಸ್ಟ್ರೋಕಾನ್- 2014 ಎರಡು ದಿನಗಳ ಕಾರ್ಯಕ್ರಮ ಶನಿವಾರ ಆರಂಭವಾಯಿತು. ನಗರದ ವಿಕ್ರಂ ಜ್ಯೋತ್ ಆಸ್ಪತ್ರೆಯಲ್ಲಿ ನಡೆದ ಲ್ಯಾಪ್ರೋಸ್ಕೋಪಿ ಮತ್ತು ಎಂಡೋಸ್ಕೋಪಿ ನೇರ ದೃಶ್ಯಾವಳಿಯನ್ನು ಖಾಸಗಿ ಹೋಟೆಲ್ನಲ್ಲಿ ಪರದೆ ಮೇಲೆ ಪ್ರದರ್ಶಿಸಲಾಯಿತು. ದೇಶ- ವಿದೇಶಾದ್ಯಂತ ಆಗಮಿಸಿದ್ದ ವೈದ್ಯರು ಇದನ್ನು ವೀಕ್ಷಿಸಿದರು. ಒಂದು ಪರದೆಯಲ್ಲಿ ಈ ಹಿಂದೆ ನಡೆಸುತ್ತಿದ್ದ ಶಸ್ತ್ರಚಿಕಿತ್ಸೆ ದೃಶ್ಯಾವಳಿ, ಮತ್ತೊಂದು ಪರದೆಯಲ್ಲಿ ಲ್ಯಾಪ್ರೋಸ್ಕೋಪಿ, ಎಂಡೋಸ್ಕೋಪಿ ವಿಧಾನದಿಂದ ಶಸ್ತ್ರಚಿಕಿತ್ಸೆ ನೆರವೇರಿಸುವ ಬಗ್ಗೆ ತಜ್ಞರು ಮಾಹಿತಿ ನೀಡಿದರು. ವಿಕ್ರಂ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಂ ಮಾತನಾಡಿದರು. ತಮಿಳುನಾಡಿನಿಂದ ಆಗಮಿಸಿದ್ದ ಪದ್ಮಶ್ರೀ ಪುರಸ್ಕೃತ ಡಾ.ಕೆ.ಪಳನಿಸ್ವಾಮಿ ಮಾತನಾಡಿ, ನಾನು ಸಹ ಕರ್ನಾಟಕದಲ್ಲಿಯೇ ವೈದ್ಯಕೀಯ ಶಿಕ್ಷಣ ಮುಗಿಸಿ ಹೋದೆ. ಇಲ್ಲಿಗೆ ಬರುವುದೆಂದರೆ ಖುಷಿಯಾಗುತ್ತದೆ. ತಮಿಳುನಾಡಿನಲ್ಲಿ ಈ ರೀತಿಯ ಸಮ್ಮೇಳನ ನಡೆಸಿದ್ದೆವು. ಈಗ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಸಿದ್ದೇವೆ ಎಂದು ತಿಳಿಸಿದರು.



ಗಾಯಕರ ಪ್ರತಿಭಾನ್ವೇಷಣೆ ಸ್ಪರ್ಧೆ ನಾಳೆಯಿಂದ


ಮೈಸೂರು: ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆಯು ಯಶಸ್ವಿನಿ ಗ್ರೂಪ್ಸ್ ಸಹಕಾರದೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವರ್ಧಂತಿ ನೆನಪಿನಲ್ಲಿ ಜು.14 ರಿಂದ 16 ರವರೆಗೆ ಮೈಸೂರು ಕೋಗಿಲೆ- 2014 ಎಂಬ ಗಾಯಕರ ಪ್ರತಿಭಾನ್ವೇಷಣಾ ಸ್ಪರ್ಧೆಯನ್ನು ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ. ಜು.14ರ ಬೆಳಗ್ಗೆ 10.30ಕ್ಕೆ ಮೈಸೂರು ಆಕಾಶವಾಣಿ ಉಪ ನಿರ್ದೇಶಕ ಡಾ.ಆನಂದ್ ವಿ. ಪಾಟೇಲ್ ಕಾರ್ಯಕ್ರಮ ಉದ್ಘಾಟಿಸುವರು. ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಮಾಜಿ ಶಾಸಕ ಸಿದ್ದರಾಜು, ಉದ್ಯಮಿ ಎಸ್.ಬಿ. ಮುರಳೀಧರ, ಯಶಸ್ವಿನಿ ಗ್ರೂಪ್ಸ್ ಅಧ್ಯಕ್ಷ ಯಶಸ್ವಿನಿ ಲೋಕೇಶ್ವರ ಅತಿಥಿಗಳಾಗುವರು ಎಂದು ವೇದಿಕೆಯ ನಿರ್ದೇಶಕ ಟಿ. ಮಹದೇವಸ್ವಾಮಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ, ಸಾರ್ಥಕ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭವು ಜು.20ರ ಸಂಜೆ 4.30ಕ್ಕೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದು, ಜೆಡಿಎಸ್ ಮುಖಂಡರಾದ ಭವಾನಿ ರೇವಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಸಂಸದರಾದ ಪ್ರತಾಪ್ ಸಿಂಹ, ಸಿ.ಎಸ್. ಪುಟ್ಟರಾಜು ಅತಿಥಿಗಳಾಗುವರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement