ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೈಕೋರ್ಟ್ ಕಲಾಪದಲ್ಲಿ ಕನ್ನಡ: ಕ್ರಿಯಾ ಸಮಿತಿ ಸ್ವಾಗತ

Rashmi Kasaragodu
Updated On : 13 Jul 2014, 1:06 am

ಮೈಸೂರು: ಹೈಕೋರ್ಟ್ ನಡಾವಳಿಯನ್ನು ಸಂಪೂರ್ಣವಾಗಿ ಕನ್ನಡದಲ್ಲಿ ನಡೆಸಬೇಕೆಂಬ ರಾಜ್ಯ ಸರ್ಕಾರದ ತೀರ್ಮಾನವನ್ನು ಕನ್ನಡ ಕ್ರಿಯಾ ಸಮಿತಿ ಸ್ವಾಗತಿಸಿದೆ. ಹಿಂದಿ ರಾಜ್ಯಗಳ ಹೈಕೋರ್ಟ್ಗಳಲ್ಲಿ ಹಿಂದಿ ಬಳಸಲು ಅವಕಾಶ ನೀಡಿರುವಾಗ ಕರ್ನಾಟಕದಲ್ಲಿ ಕನ್ನಡಕ್ಕೆ ಅದೇ ಮಾನ್ಯತೆ ನೀಡಬೆಕಿದೆ. ಹೈಕೋರ್ಟ್ ಕೆಳಹಂತದ ನ್ಯಾಯಾಲಯಗಳಾಗಲಿ ಕನ್ನಡವನ್ನೇ ಬಳಸಬೇಕೆಂದು ಆದೇಶ ಹೊರಡಿಸಿದ್ದರೂ ಕನ್ನಡ ಬಳಕೆ ಗಣನೀಯವಾಗಿಲ್ಲ. ವಕಾಲತ್ತು ಪತ್ರಗಳಿಂದ ಹಿಡಿದು ತೀರ್ಪುಗಳವರೆಗೆ ಶೇ.10 ರಿಂದ 20 ಮಾತ್ರ ಕನ್ನಡ ಬಳಕೆಯಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಪ. ಮಲ್ಲೇಶ್, ಉಪಾಧ್ಯಕ್ಷ ಎಂ.ಬಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸ.ರ. ಸುದರ್ಶನ, ಖಜಾಂಚಿ ಕೊ.ಸು. ನರಸಿಂಹಮೂರ್ತಿ ತಿಳಿಸಿದ್ದಾರೆ. ಕೆಳಹಂತದ ನ್ಯಾಯಾಲಯದಲ್ಲಿ ಶೇ.100 ಕನ್ನಡ ಬಳಕೆಗೆ ಉಸ್ತುವಾರಿ ವಹಿಸಲು ಹೈಕೋರ್ಟ್ ಒಂದು ಕಾವಲು ಸಮಿತಿಯನ್ನು ನೇಮಿಸಬೇಕೆಂದು ಸಮಿತಿ ಆಗ್ರಹಿಸುತ್ತದೆ. ಹಾಗೆ ತಮಿಳುನಾಡಿನ ತಾಳವಾಡಿಯಂತಹ ಗಡಿ ಪ್ರದೇಶಗಳಲ್ಲಿ ಕನ್ನಡಕ್ಕಿಟ್ಟಿದ್ದ ಅಂಕಗಳನ್ನು ಕಡಿಮೆ ಮಾಡಿ, ತಮಿಳನ್ನು ಪ್ರಥಮ ಭಾಷೆಯನ್ನಾಗಿ ಕಲಿಸಬೇಕೆಂದು ಅಲ್ಲಿನ ಸರ್ಕಾರ ಮಾಡಿರುವ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಆಗ್ರಹಿಸಬೇಕು ಎಂದು ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement