ಸ್ವಚ್ಛತೆಗೆ ಸಹಭಾಗಿತ್ವವೇ ಫಲಕಾರಿ
ಮೈಸೂರು: ನಮ್ಮ ಮನೆಯಂತೆ ಬೀದಿಯೂ, ಬಡಾವಣೆಯೂ ಸ್ವಚ್ಛವಾಗಬೇಕಾದರೆ ನಾಗರಿಕರ ಪಾತ್ರ ಬಹುಮುಖ್ಯ. ಕೇವಲ ಪೌರಕಾರ್ಮಿಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾಗಲಿ, ಅಥವಾ ಜನಪ್ರತಿನಿಧಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಾಗಲಿ ಅಥವಾ ಪಾಲಿಕೆಯು ಸರಿಯಾದ ಸವಲತ್ತು ಕಲ್ಪಿಸುತ್ತಿಲ್ಲ ಎಂತಾಗಲಿ ದೂರುವುದೇ ಮುಖ್ಯವಾಗಬಾರದು.
ಮನೆ ಮನೆ ಕಸವನ್ನು ಪ್ರತಿದಿನ ಸಂಗ್ರಹಿಸಲು ಪೌರ ಕಾರ್ಮಿಕರು ಬರಬೇಕಾದುದು ಕರ್ತವ್ಯ. ಆದರೆ ಆನೇಕ ಕಾರಣಗಳಿಂದ ಬರದೇ ಹೋದರೆ, ಆ ಕಸವನ್ನು ಮನೆಯಲ್ಲಿ ಇರಿಸಿಕೊಂಡಿರಬೇಕು. ಅದರ ಹೊರತಾಗಿ ಅಲ್ಲಿನ ರಸ್ತೆಬದಿಗೊ, ಮೋರಿಗೋ ಅಥವಾ ಖಾಲಿ ಜಾಗಕ್ಕೋ ಅಥವಾ ಕಸದ ತೊಟ್ಟಿ ಇರುವ ಹೊರ ಭಾಗದಲ್ಲಿ ಸುರಿಯುವ ಮೂಲಕ ಅನಾರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಮುಂದಾಗಬಾರದು. ಎಲ್ಲರ ಮನೆಗೂ ಬೆಳಗ್ಗೆ 6 ಅಥವಾ 8 ಗಂಟೆಗೆ ಆಟೋ ಟಿಪ್ಪರ್ ಬರಲು ಸಾಧ್ಯವಾಗುವುದಿಲ್ಲ. ಬಂದ ಸಮಯದಲ್ಲಿ ಕಸ ನೀಡಲು ಮುಂದಾಗಬೇಕು.
ಕೆಲವು ಬಡಾವಣೆಯಲ್ಲಿ ಕಸದ ತೊಟ್ಟಿಯನ್ನು ಇಡಲು ಸಮಸ್ಯೆ ಎದುರಾಗುವುದನ್ನು ಇಲ್ಲವೆನ್ನುವಂತಿಲ್ಲ. ನಮ್ಮ ಮನೆಯ ಮುಂದೆ ಇಡುವುದು ಬೇಡ ಎನ್ನತ್ತಾರೆ ನಿವಾಸಿಗಳು. ಏಕೆಂದರೆ ಸ್ವಚ್ಛತೆ ದೃಷ್ಟಿಯಿಂದ. ತಮ್ಮ ಮನೆಯ ಬಳಿ ಸ್ವಚ್ಛತೆ ಕಾಪಾಡುವಂತೆ ಇಡೀ ಬೀದಿಯ ಅಥವಾ ವಾರ್ಡ್ನ ಸ್ವಚ್ಛತೆ ಕಾಪಾಡುವುದು ಸಹ ನಾಗರಿಕರ ಕೆಲಸವಾದಾಗ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಿದಾಗ ಮಾತ್ರ ಹೆಚ್ಚಿನ ಪ್ರಗತಿ ಸಾಧಿಸಬಹುದು ಎಂಬುದರಲ್ಲಿ ಎರಡು ಮಾತಿಲ್ಲ.
ಪ್ಲಾಸ್ಟಿಕ್ ಕವರ್ಗಳು: ಕುವೆಂಪುನಗರದ ಕೆಎಚ್ಬಿ ಹೆಸರಿನ ವಾರ್ಡ್ ಸಂಖ್ಯೆ 17 ರ ವ್ಯಾಪ್ತಿಯಲ್ಲಿ ಉಮಾಮಹೇಶ್ವರಿ, ಭವನೇಶ್ವರಿ ಹಾಗೂ ಚೆನ್ನಮ್ಮ ಚಂದ್ರಿಕಾ ಎಂಬ ಮೂರು ಉದ್ಯಾನವನಗಳಿವೆ. ಅದರೊಳಗೆ ಹೋದರೆ ಖಾಲಿ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ಕವರ್ಗಳು ಮುಂತಾದ ತ್ಯಾಜ್ಯಗಳು ಅಸಹ್ಯ ತರಲಿದೆ. ವಿಹಾರಕ್ಕಾಗಿ ಅಥವಾ ಆಟೋಟಕ್ಕಾಗಿ ಬರುವ ಸುತ್ತಮುತ್ತಲ ನಿವಾಸಿಗಳು ಇದರಿಂದ ಮುಂಜುಗರ ಪಡುವಂತಾಗಿದೆ. ಆದ್ದರಿಂದ ಈ ರೀತಿ ಸಾರ್ವಜನಿಕರ ಸ್ಥಳದಲ್ಲಿ ಅನೈತಿಕ ಚಟುವಟಿಕೆ ನೆಡೆಸುವ ಹಾಗೂ ಅನೈರ್ಮಲ್ಯಕ್ಕೆ ಕಾರಣವಾಗುವವರ ವಿರುದ್ಧ ಸ್ಥಳೀಯ ಪೊಲೀಸರು ಕಾನೂನು ಕ್ರಮ ವಹಿಸಿದಾಗ ಇದನ್ನು ತಡೆಗಟ್ಟಬಹುದು.
ಜೆಸ್ಕೋ ಕಂಪನಿಯವರು 24್ಗ7 ನೀರು ಸರಬರಾಜ ಸಂಪರ್ಕ ಕಲ್ಪಿಸುವ ಸಲುವಾಗಿ ರಸ್ತೆಗಳನ್ನು ಅಗೆದು ಕಾಮಗಾರಿ ನಡೆಸಿ ಸರಿಯಾಗಿ ಮುಚ್ಚುವುದಿಲ್ಲ. ಮಳೆ ಬಂದಾಗ ಇದು ಕೊಟ್ಟಿಕೊಂಡಿ ಹೋಗಿ ಮೋರಿಗೆ ಮಣ್ಣು ಸೇರುತ್ತದೆ. ರಸ್ತೆಯು ಹಳ್ಳ ಬೀಳುತ್ತದೆ. ಆದ್ದರಿಂದ ಸರಿಯಾಗಿ ಪ್ಯಾಚ್ ವರ್ಕ್ ಮಾಡಬೇಕು. ಇಲ್ಲದಿದ್ದರೆ ಇದು ಸಹ ನಗರದ ಸ್ವಚ್ಚತೆಗೆ ಹಾಗೂ ಸೌಂದರ್ಯಕ್ಕೆ ಧಕ್ಕೆ ತರಲಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು.
ಈ ವಾರ್ಡ್ ವ್ಯಾಪ್ತಿಯು ಉತ್ತರಕ್ಕೆ ಉದಯರವಿ ರಸ್ತೆಯ ಕುವೆಂಪುನಗರ ಮತ್ತು ರಾಮಕೃಷ್ಣನಗರ ಬಡಾವಣೆಯ ಮಧ್ಯೆ ರಸ್ತೆಯ ಬಿಂದುವಿನಿಂದ ಉದಯರವಿ ರಸ್ತೆಯ ಮೂಲಕ ಇಸ್ಕಾನ್ ದೇವಸ್ಥಾನದ ಸರಹದ್ದಿನ ಮಳೆ ಚರಂಡಿಯವರೆಗೆ. ಪೂರ್ವಕ್ಕೆ ಇಸ್ಕಾನ್ ದೇವಸ್ಥಾನದ ಮತ್ತು ಮಳೆ ನೀರು ಚರಂಡಿ ಬಿಂದುವಿನಿಂದ ಮಹದೇಶ್ವರ ದೇವಸ್ಥಾನ ಹಿಂಭಾಗದ ರೆವಿನ್ಯೂ ಬಡಾವಣೆಯವರೆಗೆ. ದಕ್ಷಿಣಕ್ಕೆ ಮಹದೇಶ್ವರ ದೇವಸ್ಥಾನದಿಂದ ರವಿನ್ಯೂ ಬಡಾವಣೆಯ ಮಳೆನೀರು ಚರಂಡಿ ಬಿಂದುವಿನಿಂದ ಆದಿಚುಂಚನಗಿರಿ ರಸ್ತೆಯ ಮೂಲಕ ಕೆಎಸ್ಆರ್ಟಿಸಿ ಡಿಪೋವರೆಗೆ. ಪಶ್ಚಿಮಕ್ಕೆ ಆದಿಚುಂಚನಗಿರಿ ಜೋಡಿ ರಸ್ತೆಯ ನಿಜಲಿಂಗಪ್ಪ ವೃತ್ತದಿಂದ ನ್ಯೂಕಾಂತರಾಜ ಅರಸ್ ರಸ್ತೆಯ ಬಿಂದುವಿನಿಂದ ನೃಪತುಂಗ ರಸ್ತೆಯ ಮೂಲಕ ಹಡಾ ೇರಕಿಕಿರ ವರೆಗೆ.
ಅಲ್ಲಂದ 807 ಹುಡ್ಡೋ ಪಕ್ಕದ ರಸ್ತೆಯಲ್ಲಿ ಹಾದಿ ಹೋಗಿ ನಾನಾ ಬಡಾವಣೆಯವರೆಗೆ ಒಳಗೊಂಡಿದೆ. ಇಲ್ಲಿನ ಭಾಗದಲ್ಲಿ 11 ಸಾವಿರ ಜನಸಂಖ್ಯೆಯಿದ್ದು, 2500 ಮನೆಗಳು ಹಾಗೂ 310 ಕ್ಕೂ ಅಧಿಕ ಉದ್ದಿಮೆಗಳಿವೆ.
ಆಯಾಯ ವಾರ್ಡ್ ತ್ಯಾಜ್ಯವನ್ನು ಸಂಸ್ಕರಿಸುವ ಸಲುವಾಗಿ ಶೂನ್ಯ ಕಸ ನಿರ್ವಹಣಾ ಘಟಕ ಸ್ಥಾಪಿಸುವುದು ಅವಶ್ಯಕ. ಇದಕ್ಕಾಗಿ ನಮ್ಮ ವಾರ್ಡ್ನಲ್ಲಿ ಮಹಿಳಾ ಸಂಘದವರು ಮುಂದೆ ಬಂದಿದ್ದಾರೆ. ಆದರೆ ಅದಕ್ಕಾಗಿ 1 ಎಕರೆ ಸ್ಥಳಾವಕಾಶ ಬೇಕು. ಇದರ ಸ್ಥಾಪನೆಯಿಂದ 6-7 ಕಿ.ಮೀ ದೂರದಲ್ಲಿರುವ ಎಕ್ಸೆಲ್ಪ್ಲಾಂಟ್ಗೆ ಓಡಾಡುವ ಡೀಸಲ್ ಖರ್ಚು ಹಾಗೂ ಸಮಯ ಉಳಿತಾಯವಾಗಲಿದೆ. ಮನೆ ಮನೆಯಲ್ಲಿ ಮೂಲದಲ್ಲೇ ಕಸ ವಿಂಗಡಣೆಗೆ ಹಸಿರು ಹಾಗೂ ಕೆಂಪು ಪ್ಲಾಸ್ಟಿಕ್ ಬುಟ್ಟಿಗಳನ್ನು ನೀಡುವ ಕೆಲಸವನ್ನು ಪಾಲಿಕೆ ಕೈಗೊಂಡಿದೆ. ಆದರೆ ಇಡೀ ವಾರ್ಡ್ನ ಎಲ್ಲಾ ಮನೆಗಳಿಗೂ ನೀಡಿದೆ ಕೇವಲ 2 ಸಾವಿರ ಮಾತ್ರ ನೀಡುತ್ತಿದೆ. ಇದರಿಂದ ಉದ್ದೇಶಿತ ಯೋಜನೆ ಸಫಲವಾಗದು. ಎರಡು ವಾರ್ಡ್ನ ಬುಟ್ಟಿಗಳನ್ನು ಒಂದೇ ವಾರ್ಡ್ಗೆ ನೀಡಿ ನಂತರ ಸ್ಟಾಕ್ ಬಂದಾಗ ಎಲ್ಲಾ ವಾರ್ಡ್ಗಳಿಗೂ ವಿತರಿಸುವ ಕೆಲಸ ಮಾಡುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು.
- ಸ್ನೇಕ್ ಶ್ಯಾಮ್, 17ನೇ ವಾರ್ಡ್, ನಗರಪಾಲಿಕೆ ಸದಸ್ಯರು
-ಮಾ. ವೆಂಕಟೇಶ್