ಚಾಮುಂಡೇಶ್ವರಿ ಜನ್ಮೋತ್ಸವ ಆಚರಣೆ
ಮೈಸೂರು: ನಾಡ ದೇವತೆ ತಾಯಿ ಚಾಮುಂಡೇಶ್ವರಿಯ ಜನ್ಮೋತ್ಸವವನ್ನು ನಗರದ ವಿವಿಧೆಡೆ ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದ ಗೋಕುಲಂನ ಚಾಮುಂಡೇಶ್ವರಿ ಗೆಳೆಯರ ಬಳಗದಿಂದ ಆದಿತ್ಯ ಆಸ್ಪತ್ರೆ ವೃತ್ತದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ಪಾಲ್ಗೊಂಡ ಭಕ್ತರಿಗಾಗಿ ಅನ್ನಸಂಪರ್ತಣೆ ಏರ್ಪಡಿಸಲಾಗಿತ್ತು. ಗಾಯತ್ರಿಪುರಂನ ವಿಶ್ವಕರ್ಮ ಕಾಲೋನಿಯಲ್ಲಿ ಕನ್ನಡ ಕಸ್ತೂರಿ ರಸ್ತೆಬದಿ ವ್ಯಾಪಾರಿಗಳ ಸಂಘದಿಂದ ಚಾಮುಂಡೇಶ್ವರಿ ಹಬ್ಬ ಆಚರಿಸಿ, ಗಣ್ಯರನ್ನು ಸನ್ಮಾನಿಸಲಾಯಿತು. ರಮಾಬಾಯಿ ನಗರದ ಗುರೂರು ಬಡಾವಣೆಯಲ್ಲಿ ಚಾಮುಂಡೇಶ್ವರಿ ದೇವಿಗೆ ದೀಪ ಲಕ್ಷ್ಮೀ ಪೂಜೆ, ಅಷ್ಠಲಕ್ಷ್ಮೀ ಪೂಜೆ ನೆರವೇರಿಸಲಾಯತು.
ಮಂಡಿ ಮೊಹಲ್ಲಾದಲ್ಲಿರುವ ಎಲ್ಲಮ್ಮಾಂಬ, ಚಂದ್ರಗುಪ್ತಾಂಬ ದೇವಸ್ಥಾನದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ದೇವಿಗೆ ವಿವಿಧ ರೀತಿಯ ಅಭಿಷೇಕ, ಅರ್ಚನೆಗಳು, ವಸ್ತ್ರಾಲಂಕಾರ, ಹೂವಿನ ಅಲಂಕಾರ, ವಿಶೇಷವಾಗಿ ವಿನೂತನ ಶೈಲಿಯ ನಿಂಬೆಹಣ್ಣಿನ ಅಲಂಕಾರವನ್ನು ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು.
--