ರಾಜಕಾರಣಕ್ಕೆ ಸಮಾಜ ಸೇವಾ ಕಾರ್ಯಗಳೇ ಮುನ್ನುಡಿ
ಟಿ. ನರಸೀಪುರ: ಸಮಾಜಮುಖಿಯಾಗಲು ನಾವು ಮಾಡುವ ಸಾಮಾಜಿಕ ಸೇವಾ ಕಾರ್ಯಗಳೇ ರಾಜಕಾರಣ ಪ್ರವೇಶದ ಮುನ್ನುಡಿಯಾಗಲಿದೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಸೇವಾ ಕಾರ್ಯ ಮಾಡುವವರನ್ನು ಜನರು ಗುರುತಿಸುವುದರಿಂದ ರಾಜಕೀಯ ರಂಗ ಪ್ರವೇಶಿಸಬಹುದು ಎಂದು ತಿಳಿಸಿದರು.
ರೋಟರಿಯಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದರಿಂದ ತಾವು ಕೂಡ ಸದಸ್ಯತ್ವ ನೀಡುವಂತೆ ಕೇಳಿದಾಗ ರಾಜಕಾರಣಿ ಎಂಬ ಕಾರಣಕ್ಕೆ ಅವಕಾಶ ನೀಡಲಿಲ್ಲ. ಕಳೆದ ವರ್ಷವಷ್ಟೇ ಕೊಳ್ಳೇಗಾಲ ರೋಟರಿ ಸದಸ್ಯನಾಗಿ ನೊಂದವರಿಗೆ ನೆರವಾಗುವ ಕಾರ್ಯದಲ್ಲಿ ಕೈಜೋಡಿಸುತ್ತಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ ಮಾತನಾಡಿ, ಸಮಾಜಕ್ಕೆ ಸೇವೆ ಎಂದು ಬಳುವಳಿ ನೀಡಿದ್ದನ್ನು ಸೇವಾರ್ಥ ಎಂದು ಬಿಂಬಿಸಿಕೊಳ್ಳಬಾರದು. ಪ್ರಚಾರಕ್ಕೆ ಸೇವೆ ಎಂಬುದನ್ನು ಬಳಕೆ ಮಾಡಿಕೊಂಡಾಗ ಅದು ಸೇವೆಯಾಗುವುದಿಲ್ಲ. ಸಾಮಾಜಿಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯತೆ ಅರಿತು ನೆರವು ನೀಡುವ ಮೂಲಕ ಸೇವೆಯಲ್ಲಿಯೇ ಸಾರ್ಥಕತೆ ಕಂಡುಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಜ್ಞ ವೈದ್ಯೆ ಡಾ. ಲೋಕೇಶ್ವರಿ, ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಮಂಜುಳ, ನಿವೃತ್ತ ಸೈನಿಕ ಕುಳ್ಳೇಗೌಡ, ನಿವೃತ್ತ ದೈಹಿಕ ಶಿಕ್ಷಕ ಆರ್.ಎಸ್. ಬಸವರಾಜು, ವಿಕಲಚೇತನ ಶಾಂತರಾಜು ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ರೋಟರಿ ವಲಯ ಸಹಾಯಕ ಗೌರ್ನರ್ ಎಂ. ಶಿವಾನಂದ, ಪ್ರತಿನಿಧಿ ಬಿ.ಕೆ. ವೆಂಕಟೇಶ್‌ಪ್ರಸಾದ್, ಮಾಜಿ ಗೌರ್ನರ್ ಆರ್.ಎಸ್. ನಾಗಾರ್ಜುನ್, ಶ್ರೀನಿವಾಸಶೆಟ್ಟಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಎನ್. ನಿಂಗಯ್ಯ, ಮುಖಂಡ ಕೃಷ್ಣಪ್ಪ, ಚಾಮರಾಜನಗರ ಎಪಿಎಂಸಿ ಅಧ್ಯಕ್ಷ ಸಿ. ರಾಜಶೇಖರ, ಶ್ರೀನಿವಾಸ್ ಇದ್ದರು.
ಪದಾಧಿಕಾರಿಗಳಿಗೆ ಪದವಿ ಪ್ರದಾನ
ನೂತನ ಪದಾಧಿಕಾರಿಗಳಾಗಿ ಟಿ.ಜಿ. ಪುಟ್ಟಸ್ವಾಮಿ (ಅಧ್ಯಕ್ಷರು), ಎನ್.ಎಸ್. ಜ್ಞಾನೇಂದ್ರಮೂರ್ತಿ (ಕಾರ್ಯದರ್ಶಿ), ಡಿ. ದೇವರಾಜ ಅರಸು (ನಿಯೋಜಿತ ಅಧ್ಯಕ್ಷ), ಈಶ್ವರರೆಡ್ಡಿ (ಜಂಟಿ ಕಾರ್ಯದರ್ಶಿ), ರಾಮಮೂರ್ತಿ(ಖಜಾಂಚಿ), ಎಸ್.ಎನ್. ಸಿದ್ದಾರ್ಥ, ತೋಟದಪ್ಪ ಬಸವರಾಜು, ಬಿ.ಜಿ. ರಾಜಶೇಖರ್, ಬಿ.ಎಸ್. ಬಸಪ್ಪ, ನಂಜುಂಡೇಗೌಡ, ಡಾ. ರವಿಶಂಕರ್, ಭವರ್‌ಲಾಲ್ ಜೈನ್, ಪುಟ್ಟಸ್ವಾಮಿ, ಪಿ. ಜಯಶೀಲ, ಮಂಜು, ಜಿ. ನಟರಾಜು, ಕೆ. ಪ್ರಕಾಶ್, ಬಸವರಾಜಪ್ಪ, ಎಂ. ಕೃಷ್ಣಪ್ಪ, ಸಬೀನಾಬೇಗಂ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾದರು. ಮಾಜಿ ಸಹಾಯಕ ಗೌರ್ನರ್ ಜಿ.ಆರ್. ಅಶ್ವಥ್‌ನಾರಾಯಣ ರೋಟರಿ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿದರು.