ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಶೋಧನೆ ಜನಸಾಮಾನ್ಯರಿಗೂ ತಲುಪಲಿ: ಪ್ರದೀಪ್ ವಿ. ದೇಸಾಯಿ

Mainashree
Updated On : 23 Jul 2014, 11:16 am

ಮೈಸೂರು: ಸಂಶೋಧನೆಗಳು ಜನರನ್ನು ತಲುಪದ ಹೊರತು ಯಾವುದೆ ಪರಿಣಾಮ ಉಂಟಾಗದು ಎಂದು ಜನರಲ್ ಎಲೆಕ್ಟ್ರಾನಿಕ್ಸ್‌ನ ತಂತ್ರಜ್ಞಾನ ಮುಖ್ಯಸ್ಥ ಡಾ.ಪ್ರದೀಪ್ ವಿ. ದೇಸಾಯಿ ಹೇಳಿದರು.
ಮೈಸೂರು ವಿವಿ ಮಾನಸಗಂಗೋತ್ರಿಯ ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ ಮತ್ತು ಗಣಕ ವಿಜ್ಞಾನ ಅಧ್ಯಯನ ವಿಭಾಗ ಬುಧವಾರ ಆಯೋಜಿಸಿದ್ದ 5ನೇ ಗಣಿತ ವಿಜ್ಞಾನ ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಕೈಗಾರಿಕೆಗಳು ಗಣಿತ ವಿಜ್ಞಾನ ಅಳವಡಿಸಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳೂ ಗಣಿತ ಒಂದು ಕ್ಲಿಷ್ಟ ವಿಷಯ ಎಂದು ತಿಳಿದಿದ್ದಾರೆ. ಗಣಿತದ ಉದ್ದೇಶ ಸಮಸ್ಯೆಯ ವಿಶ್ಲೇಷಣೆ ಮಾಡುವುದಾಗಿದೆ. ಗಣಿತ ಇಲ್ಲದ ವಿಶ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯ ಇಲ್ಲ. ಏಕೆಂದರೆ ಪ್ರತಿಯೊಬ್ಬ ಸಂಶೋಧಕರಿಗೆ ಮತ್ತು ವಿಶ್ಲೇಷಕರಿಗೆ ಗಣಿತ ವಿಜ್ಞಾನ ಅಗತ್ಯ ಎಂದರು.
ಬಹಳ ಮಂದಿ ಸಂಶೋಧಕರು ಗಣಿತ ಒಂದು ಪಠ್ಯ ವಿಷಯ ಅಥವಾ ಶೈಕ್ಷಣಿಕ ಕ್ರಮ ಎಂದು ತಿಳಿದಿದ್ದಾರೆ. ಆದರೆ ಗಣಿತ ವಿಜ್ಞಾನ ಜೀವನ ವಿಜ್ಞಾನ ಎಂಬುದನ್ನು ಅರಿತಿಲ್ಲ ಎಂದು ವಿಷಾದಿಸಿದರು. ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರ ಸಂಯೋಜಕಿ ಡಾ.ಲಲಿತಾ ರಂಗರಾಜನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ.ನಾಗಭೂಷಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement