ಸಮಾಪನೆಗೊಂಡಿರುವ ಸಹಕಾರ ಸಂಘಗಳ ನೋಂದಣಿ ರದ್ದು: ಆಕ್ಷೇಪಣೆಗಳಿದ್ದರೆ ಸಲ್ಲಿಸಿ
ಮೈಸೂರು: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ ಹಾಗೂ ನಿಯಮಗಳು 1960 ಮತ್ತು ಸಂಘಗಳ ಬೈಲಾ ರೀತ್ಯ ಕಾರ್ಯಚಟುವಟಿಕೆ ನಡೆಸದೆ ಇರುವುದರಿಂದ ಈ ಕೆಳಕಂಡ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಿ ಸಮಾಪನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹೇಳಿದ್ದಾರೆ.
ತಾಲೂಕು ಪ. ಜಾತಿ ಮತ್ತು ಪಂಗಡದ ಬೀಜ ಉತ್ಪಾದಕರ ಸಹಕಾರ ಸಂಘ, ದಕ್ಷಿಣ ರೈಲ್ವೆ ನೌಕರರ ಬಳಕೆದಾರರ ಸಹಕಾರ ಸಂಘ, ಸರ್ಕಾರಿ ಸಿಲ್ಕ್ ಪಿಲೀಚರ್ ಎಂಪ್ಲಾಯಿಸ್ ಕೋ-ಆಪರೇಟಿವ್ ಸೊಸೈಟಿ, ತಾಲೂಕು ಗ್ರಾಮಾಂತರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಮೈಸೂರು ಸಿಟಿ ಪೊಲೀಸ್ ಬಳಕೆದಾರರ ಸಹಕಾರ ಸಂಘ, ಸದ್ಭಾವನ ಪತ್ತಿನ ಸಹಕಾರ ಸಂಘ, ಪ್ರಿಯದರ್ಶಿನಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಸಿಪಿಸಿ ಪಾಲಿಟೆಕ್ನಿಕ್ ನೌಕರರ ಪತ್ತಿನ ಸಹಕಾರ ಸಂಘ, ವೈನ್ ಮರ್ಚೆಂಟ್ಸ್ ಪತ್ತಿನ ಸಹಕಾರ ಸಂಘ, ಜ್ವಾಲಾಮುಖಿ ವಿವಿಧೋದ್ದೇಶ ಸಹಕಾರ ಸಂಘ, ಸಹರಾ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರ ಸಂಘ, ಮೈಸೂರು ಜಿಲ್ಲಾ ಸಹಕಾರ ಕೃಷಿ ಉತ್ಪನ್ನ ಮಾರಾಟ ಒಕ್ಕೂಟ ಹಾಗೂ ಗೌರ್ನಮೆಂಟ್ ಸಿಲ್ಕ್ ಪಿಲೀಚರ್ ನೌಕರರ ಸಹಕಾರ ಸಂಘ, ಸಹಕಾರಿ ಸಂಘಗಳು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ ಹಾಗೂ ನಿಯಮಗಳು 1960 ಮತ್ತು ಸಂಘಗಳ ಬೈಲಾ ರೀತ್ಯಾ ಕಾರ್ಯಚಟುವಟಿಕೆ ನಡೆಸದೆ ಇರುವುದರಿಂದ ಈ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಿ ಸಮಾಪನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಈ ಸಂಘಗಳ ಅಸ್ತಿತ್ವ, ಲೆಕ್ಕ ಪುಸ್ತಕ, ಆಸ್ತಿ ಮತ್ತು ದಾಖಲಾತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಸಮಾಪನಾಧಿಕಾರಿ ಸ್ವಯಂ ಪ್ರಭಾರ ವಹಿಸಿಕೊಂಡಿರುತ್ತಾರೆ. ಈ ಸಂಘಗಳಿಗೆ ಸಮಾಪನಾ ಆದೇಶ ಹೊರಡಿಸಿ ಅನೇಕ ವರ್ಷಗಳಾದರೂ ಸಂಘವನ್ನು ಪುನಶ್ಚೇತನಗೊಳಿಸಲು ಸಂಘದ ಸದಸ್ಯರು, ಸಾರ್ವಜನಿಕರಿಂದಾಗಲಿ ಯಾವುದೇ ಮನವಿ ಅಹವಾಲುಗಳು ಬಾರದ ಕಾರಣ ಹಾಗೂ ಪ್ರಸ್ತುತ ಸಂಘದ ಸದಸ್ಯರುಗಳಿಗೆ ಯಾವುದೇ ಪ್ರಯೋಜನ, ಸೇವೆ ದೊರೆಯುತ್ತಿಲ್ಲದಿರುವುದು ಕಂಡುಬಂದಿರುತ್ತದೆ. ಇದರಿಂದಾಗಿ ಈ ಸಂಘಗಳ ನೊಂದಣಿ ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ
ಸಂಘದ ಸದಸ್ಯರ ಹಿತದೃಷ್ಟಿಯಿಂದ ಸಂಘವನ್ನು ಪುನಶ್ಚೇತನಗೊಳಿಸಿ ಮುನ್ನಡೆಸುವ ಬಗ್ಗೆ ಸಂಘದ ಸದಸ್ಯರು, ಸಾರ್ವಜನಿಕರು ಹಾಗೂ ಇನ್ಯಾರಿಂದಾದರೂ ಆಕ್ಷೇಪಣೆ ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 15 ದಿವಸಗಳೊಳಗಾಗಿ ಈ ಕಚೇರಿಗೆ ಖುದ್ದು ಹಾಜರಾಗಿ ಲಿಖಿತ ಮನವಿಯನ್ನು ಸಂಬಂಧಪಟ್ಟ ಪೂರಕ ದಾಖಲಾತಿಗಳೊಂದಿಗೆ ಸಲ್ಲಿಸುವುದು. ಯಾವುದೇ ಆಪ್ಷೇಪಣೆಗಳು ಬಾರದಿದ್ದರೆ ಸಂಘಗಳ ನೋಂದಣಿಯನ್ನು ರದ್ದುಪಡಿಸಲಾಗುವುದು. ನಂತರ ಬರುವ ಯಾವುದೇ ಅಹವಾಲುಗಳನ್ನು ಪರಿಗಣಿಸಲಾಗಿವುದಿಲ್ಲ ಎಂದು ಅವರು ಹೇಳಿದ್ದಾರೆ.