ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂತಸ ಸಂತಾನೋತ್ಪತ್ತಿ ಕೇಂದ್ರ ಇಂದು ಉದ್ಘಾಟನೆ

Mainashree
Updated On : 24 Jul 2014, 10:29 am

ಮೈಸೂರು: ಸಂತಸ ಸಂತಾನೋತ್ಪತ್ತಿ ಮತ್ತು ಎಂಡೋ ಸರ್ಜರಿ ಸಂಸ್ಥೆಯ ಮೈಸೂರು ಕೇಂದ್ರದ ಉದ್ಘಾಟನೆ ಜು. 25ರ ಬೆಳಗ್ಗೆ 9ಕ್ಕೆ ಅಶೋಕ ವೃತ್ತ ಸಮೀಪದ ಹೊಸ ಕಾಂತರಾಜೇ ಅರಸ್ ರಸ್ತೆಯಲ್ಲಿ ನಡೆಯಲಿದೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೇಂದ್ರ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಶಾಸಕ ವಾಸು, ಪ್ರಸೂತಿ ತಜ್ಞೆ ಡಾ.ಆರ್.ಸುಧಾ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್ ಅತಿಥಿಯಾಗಿ ಭಾಗವಹಿಸುವರು ಎಂದು ಸಂತಸ ಸಂಸ್ಥೆಯ ಪ್ರಧಾನ ಸಂತಾನ ತಜ್ಞೆ ಡಾ.ಎಚ್.ಆರ್. ಸೌಮ್ಯಾ ದಿನೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಕ್ಕಳಿಲ್ಲದ ದಂಪತಿಗೆ ಅಂಡಾಣುಗಳ ಉತ್ಪತ್ತಿಯನ್ನು ಸ್ಕ್ಯಾನಿಂಗ್ ಮೂಲಕ ಗಮನಿಸುವುದು, ಗರ್ಭಕೋಶದೊಳಗೆ ವೀರ್ಯಧಾರಣೆ, ಅಂತಾರಾಷ್ಟ್ರೀಯ ಮಟ್ಟದ ಪ್ರನಾಳ ಶಿಶು ಸೌಲಭ್ಯ, ಅಂಡಾಣು ದಾನ ಸೌಲಭ್ಯ, ಮಹಿಳೆಯರಿಗೆ ಗರ್ಭಕೋಶದಲ್ಲಿ ತೀವ್ರ ತೊಂದರೆಯಿದ್ದಲ್ಲಿ ಆಸರೆ ತಾಯಿ ಸೌಲಭ್ಯ, ಪುರುಷರಿಗೆ ವೀರ್ಯ ಜನಕಾಂಗದ ವಿಶೇಷ ಶಸ್ತ್ರಚಿಕಿತ್ಸೆಗಳು, ವೀರ್ಯಾಣು, ಭ್ರೂಣಗಳ ಶಿತಲೀಕರಣ ಸೌಲಭ್ಯ, ಆಧುನಿಕ ಉದರದರ್ಶಕ ಹಾಗೂ ಗರ್ಭಕೋಶದರ್ಶಕ, ಶಸ್ತ್ರಚಿಕಿತ್ಸೆ, ಜೆನಿಟಿಕ್ ಕ್ಲಿನಿಕ್ ಸೌಲಭ್ಯ ಇದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement