ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹುಲಿ ದಾಳಿ: ಯುವಕನಿಗೆ ತೀವ್ರ ಗಾಯ

Mainashree
Updated On : 24 Jul 2014, 10:28 am

ಎಚ್.ಡಿ. ಕೋಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಎನ್.ಬೇಗೂರು ವನ್ಯಜೀವಿ ವಲಯದ ಕಾಡಂಚಿನ ಕಳಸೂರು ಗ್ರಾಮದ ಬಳಿ ಹುಲಿ ದಾಳಿಗೆ ಯುವಕನೊಬ್ಬ ತೀವ್ರ ಗಾಯಗೊಂಡಿದ್ದಾನೆ.
ಕಳಸೂರು ಗ್ರಾಮದ ನಿವಾಸಿ ಗೋಪಾಲಗೌಡರ ಪುತ್ರ ರಾಮು (23) ಗಾಯಗೊಂಡವರು. ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿನಲ್ಲಿ ಕಾಡಿಗೆ ಹೊಂದಿಕೊಂಡಂತಿರುವ ತಮ್ಮ ಜಮೀನಿನಲ್ಲಿ ಕುರಿ ಮೇಯಿಸುವ ವೇಳೆ ಹಿಂದಿನಿಂದ ಬಂದ ಹುಲಿ ದಾಳಿ ನಡೆಸಿದೆ. ಈತನ ಕಿರುಚಾಟ ಕೇಳಿ ಅಕ್ಕ ಪಕ್ಕ ಜಮೀನಿನವರು ಹುಲಿಯನ್ನು ಓಡಿಸಿದ್ದಾರೆ.
ಗಾಯಾಳುವಿನ ಬಾಯಿ, ಬೆನ್ನು, ಕೈ ಮತ್ತು ಕಾಲಿಗೆ ತೀವ್ರ ಗಾಯವಾಗಿದೆ. ಕಳಸೂರು ಗ್ರಾಮದ ಬಳಿ ಒಂದು ವರ್ಷದಿಂದಲೂ ಹುಲಿ ಓಡಾಡಿಕೊಂಡಿದೆ. ಗ್ರಾಮದಲ್ಲಿ ಹತ್ತಾರು ಹಸು ಮತ್ತು ದನ ಕರು, ಕುರಿ ಮತ್ತು ಆಡನ್ನು ತಿಂದಿದೆ. ಈಗ ಹುಲಿ ಜನರ ಮೇಲೆ ದಾಳಿ ನಡೆಸಿರುವುದು ಆತಂಕ ಮೂಡಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಜಾನುವಾರುಗಳ ಮೇಲೆ ದಾಳಿ ನಡೆದಾಗ ಕ್ಯಾಮೆರ ಇಡಲಾಗಿತ್ತು. ಇದರಲ್ಲಿ ಚಿರತೆ ಟ್ರ್ಯಾಫ್ ಆಗಿರುವುದು ಕಂಡು ಬಂದಿದೆ. ಆದರೆ ಗ್ರಾಮಸ್ಥರು ಮಾತ್ರ ವಯಸ್ಸಾದ ಹುಲಿ ದಾಳಿ ನಡೆಸುತ್ತಿದೆ ಎಂದು ತಿಳಿಸಿದ್ದರು. ಆಸ್ಪತ್ರೆಗೆ ಎನ್. ಬೇಗೂರು ವಲಯ ಅರಣ್ಯಾಧಿಕಾರಿ ಚಿಕ್ಕರಾಜೇಂದ್ರ ಭೇಟಿ ನೀಡಿ ಗಾಯಾಳುವಿನಿಂದ ಮಾಹಿತಿ ಪಡೆದರು. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement