ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

35 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಲ್ಮ್

Mainashree
Updated On : 27 Jul 2014, 11:47 am

ದೇವರಾಜು ಕಪ್ಪಸೋಗೆ  
ಚಾಮರಾಜನಗರ: ರಾಜ್ಯದ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಸೇರಿದಂತೆ 34 ನಗರ ಮತ್ತು ಪಟ್ಟಣ ಪ್ರದೇಶದ ಜನರ ಬಡತನ ನಿರ್ಮೂಲನೆಗಾಗಿ ಪ್ರಸ್ತುತ ವರ್ಷ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ನಲ್ಮ್) ಅನುಷ್ಠಾನಗೊಳ್ಳಲಿದೆ.
ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯದ ಹಿಂದಿನ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಪರಿಷ್ಕೃತ ರೂಪವೇ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ನಲ್ಮ್).
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಬಡತನ ರೇಖೆಗಿಂತ ಮೇಲೆತ್ತಲು ಲಾಭದಾಯಕ ಸ್ವಯಂ ಉದ್ಯೋಗ ಮತ್ತು ಕೌಶಲ್ಯ, ಉದ್ಯೋಗಾವಕಾಶಗಳನ್ನು ಪಡೆಯಲು ಸಮರ್ಥಗೊಳಿಸಿ ದುರ್ಬಲತೆ ಹೋಗಲಾಡಿಸುವ ಹಾಗೂ ಬಡವರ ತಳಮಟ್ಟದ ಸಂಸ್ಥೆಗಳನ್ನು ದೃಢವಾಗಿ ಸ್ಥಾಪಿಸುವ ಮೂಲಕ ಸುಸ್ಥಿರತೆಯ ಆಧಾರದ ಮೇಲೆ ಜೀವನೋಪಾಯದಲ್ಲಿ ಗಣನೀಯ ಸುಧಾರಣೆ ತರುವ ಉದ್ದೇಶದಿಂದ ರಾಷ್ಟೀಯ ನಗರ ಜೀವನೋಪಾಯ ಅಭಿಯಾನ (ಃಛಡ್ಝ್ಟಿಟಿಛಟ ್ಖ್ಠಛಿಛಟಿ ಔ್ಝಢಜಟಝ್ಟ್ಟಜ ಂ್ಝಡಡ್ಝ್ಟಟಿಡ) ಯೋಜನೆಯನ್ನು ಜಾರಿಗೊಳಿಸಲಾಗಿದೆ.
ರಾಜ್ಯದ 34 ನಗರ ಸ್ದಳೀಯ ಸಂಸ್ದೆಗಳ ಒಟ್ಟು 6,22,604 ಕುಟುಂಬ ಬಡತನ ರೇಖೆಗಳಿಗಿಂತ ಕೆಳಗಿವೆ ಎಂಬ ಅಂದಾಜಿನ ಅನ್ವಯ ಯೋಜನೆ ರೂಪಿಸಿ ಹಾಗೂ ಕೇಂದ್ರದಿಂದ ಶೇ.75 ಹಾಗೂ ರಾಜ್ಯದಿಂದ ಶೇ.25 ಅನುದಾನದಂತೆ ಭರಿಸಲಾಗುತ್ತದೆ.
ಈ ಅನುದಾನದಿಂದ ನಗರ ಪ್ರದೇಶದ ಬಡತನ ನಿರ್ಮೂಲನಾ ಮತ್ತು ಜೀವನೋಪಾಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ನಗರದ ಬಡವರಿಗೆ ಕುಡಿಯುವ ನೀರು, ನೈರ್ಮಲ್ಯ, ಸುರಕ್ಷತಾ ಮತ್ತು ಭದ್ರತಾ ಹಾಗೂ ಸಾಮಾಜಿಕ ಭದ್ರತಾ ವ್ಯವಸ್ಥೆ, ವಿವಿಧ ಪಿಂಚಣಿ, ಆಹಾರ, ಆರೋಗ್ಯ ಪಾಲನೆ, ಶಿಕ್ಷಣ, ವಸತಿ ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಲ್ಲದೆ ಇತರರನ್ನು ಅವಲಂಬಿತ ಮಕ್ಕಳು, ವಯೋವೃದ್ಧರು, ಅಂಗವಿಕಲರು, ಮಾನಸಿಕ ಅಸ್ವಸ್ಥರು, ಚೇತರಿಸಿಕೊಳ್ಳುತ್ತಿರುವ ರೋಗಿಗಳ ಮತ್ತು ವಸತಿರಹಿತ ದುರ್ಬಲ ವರ್ಗಗಳ ಅಗತ್ಯತೆ ಪೂರೈಸಲಾಗುವುದು ಮತ್ತು ನಗರದ ಬೀದಿ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳಾವಕಾಶ, ಮಾರುಕಟ್ಟೆ ಅವಕಾಶ, ಸಾಂಸ್ಥಿಕ ಸಾಲ, ಸಾಮಾಜಿಕ ಭದ್ರತೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುವ ಮೂಲಕ ನಗರ ಜೀವನೋಪಾಯ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯತಂತ್ರ ರೂಪಿಸಲಾಗುವುದು.
ಏನಿದು ನಲ್ಮ್: ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯ ಈ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಿದ ಮಾರ್ಗ ಸೂಚಿಯನ್ವಯ ಪರಿಷ್ಕೃತ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ರಚಿಸಲಾದ ನೆರೆಹೊರೆ ಗುಂಪುಗಳನ್ನು ಸ್ವ- ಸಹಾಯ ಸಂಘಗಳಾಗಿ ನಿರಂತರ ಉಳಿತಾಯ ಚಟುವಟಿಕೆ ಮಾಡುವಂತೆ ಹಾಗೂ ನರೆಹೊರೆ ಸಮಿತಿ ಮತ್ತು ಸಮುದಾಯ ಅಭಿವೃದ್ಧಿ ಸಂಘಗಳನ್ನು ಕ್ರಮೇಣವಾಗಿ ರಾಷ್ಟೀಯ ನಗರ ಜೀವನೋಪಾಯ ಅಭಿಯಾನ ಯೋಜನೆ ಸಮುದಾಯ ರಚನೆಗೆ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು 2011ರ ಜನಗಣತಿ ಪ್ರಕಾರ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ ಮತ್ತು ಜಿಲ್ಲಾ ಕೇಂದ್ರ ಸ್ಥಾನದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗುತ್ತದೆ.
ಅನುಷ್ಠಾನ ಹೇಗೆ: ನಲ್ಮ್ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅನುಕೂಲವಾಗುವಂತೆ ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ.
    ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸಮಿತಿಯ ಸದಸ್ಯ ಸಂಚಾಲಕರಾಗಿದ್ದು, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಉದ್ಯೋಗ ಮತ್ತು ತರಬೇತಿ ಇಲಾಖೆಯ ನೋಡಲ್ ಅಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸಮಾಜಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ, ಗಿರಿಜನ ಕಲ್ಯಾಣಾಧಿಕಾರಿಗಳು, ಆಹಾರ ಇಲಾಖೆ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್, ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಇಬ್ಬರು ಪ್ರತಿನಿಧಿಗಳು, ಸ್ವ-ಸಹಾಯ ಗುಂಪುಗಳ ಮತ್ತು ಒಕ್ಕೂಟಗಳ ಇಬ್ಬರು ಪ್ರತಿನಿಧಿಗಳು, ಪೌರಾಯುಕ್ತರು (ನಲ್ಮ್ ನಗರ ಯೋಜನಾಧಿಕಾರಿಗಳು) ಮತ್ತು ಅಧ್ಯಕ್ಷರು ಸೇರ್ಪಡೆ ಮಾಡಿಕೊಳ್ಳುವ ಇತರ ಪ್ರತಿನಿಧಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿ ಯೋಜನೆಯ ಅನುಷ್ಠಾನದ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತವೆ ಹಾಗೂ ಯೋಜನೆಯ ರೂಪುರೇಷೆ ತಯಾರಿಕೆ, ಆಡಳಿತ, ಹಣಕಾಸು ನಿರ್ವಹಣೆ, ಮುಂತಾದವುಗಳ ಬಗ್ಗೆ ಕ್ರಮ ಜರುಗಿಸುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement