ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಂಇಎಸ್ ದಾಂದಲೆ ವಿರುದ್ಧ ಪ್ರತಿಭಟನೆ

Mainashree
Updated On : 27 Jul 2014, 11:47 am

ಚಾಮರಾಜನಗರ: ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದಲ್ಲಿ ಮಹಾರಾಷ್ಟ್ರ ರಾಜ್ಯ ಎಂಬ ನಾಮಫಲಕ ಹಾಕಿ ಗದ್ದಲ ಎಬ್ಬಿಸಿರುವ ಎಂಇಎಸ್ ಕಾಯಕರ್ತರ ದಾಂದಲೆ ಖಂಡಿಸಿ, ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಹೈಕೋರ್ಟ್ ಆದೇಶದನ್ವಯ ತೆಗೆಸಲು ಹೊರಟ ಅಧಿಕಾರಿಗಳ ವಿರುದ್ದ ದಾಂಧಲೆ ನಡೆಸಿರುವ ಮತ್ತು ರಾಜ್ಯದ ಸಾರಿಗೆ ಬಸ್ಗಳನ್ನು ಜಖಂಗೊಳಿಸಿ ಪೊಲೀಸರು ಹಾಗೂ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವ ಕ್ರಮವನ್ನು ಪ್ರತಿಭಟನಾಕಾರರು ವಿರೋಧಿಸಿದರು.
ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು  ಎಂಇಎಸ್ ಗುಂಡಾಗಿರಿ ಹಾಗೂ ರಾಜ್ಯದ ಸರ್ಕಾರದ ಬೇಜವಾಬ್ದಾರಿ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಎಂಇಎಸ್ ಪ್ರತಿಕೃತಿ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೇನಾಪಡೆಯ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಎಂಇಎಸ್ ಪದೇ ಪದೇ ಕನ್ನಡಿಗರ ಮೇಲೆ ತನ್ನ ದೌರ್ಜನ್ಯವನ್ನು ನಡೆಸುತ್ತಾ ಬಂದಿದೆ. ಯಳ್ಳೂರು ಗ್ರಾಮದಲ್ಲಿ  ಮಹಾರಾಷ್ಟ್ರ ರಾಜ್ಯ ಎಂಬ ನಾಮಫಲಕವನ್ನು ತೆರವುಗೊಳಿಸಲು ಹೊರಟ ಅಧಿಕಾರಿಗಳ ಮೇಲೆ ಧಾಂದಲೆ ಮಾಡಿ  ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ವಿಧಾನಸಭಾ ಅಧಿವೇಶನ ನಡೆಯುತ್ತಿದ್ದರೂ ಸರ್ಕಾರ ಮತ್ತು ವಿರೋಧ ಪಕ್ಷಗಳು ಇದರ ಬಗ್ಗೆ ಚಕಾರವೆತ್ತದಿರುವುದು ಅತ್ಯಂತ ನಾಚಿಗೇಡಿನ ಸಂಗತಿಯಾಗಿದೆ ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ, ಚಾ.ವೆಂ. ರಾಜಗೋಪಾಲ್, ಚಾ.ಗು.ನಾಗರಾಜು, ಕಂಡಕ್ಟರ್ ಸೋಮನಾಯಕ, ಅರುಣ್ಕುಮಾರಗೌಡ, ಶಿವಣ್ಣಶೆಟ್ಟಿ, ರಾಜಶೇಖರ್, ಟೈಲರ್ ನಟರಾಜು, ರಮೇಶ್ ಕಾರ್ಮಿಕ್, ಸಿ.ಸಿ. ಪ್ರಕಾಶ್, ಮಲ್ಲೇಶ್, ರಾಜಶೇಖರ್(ಬಾಬು), ಹರವೆ ಗುರುಪಾದಪ್ಪ, ಸೋಮವಾರಪೇಟೆ ಮಂಜುನಾಥ್, ಸುಬ್ರಮಣ್ಯ, ಮಹೇಶ್, ಶಿವಕುಮಾರಗೌಡ, ಶಿವಣ್ಣ, ಗಣೇಶ್, ನಾಗವಳ್ಳಿ ನಾಗೇಂದ್ರ, ತಾಂಡವಮೂರ್ತಿ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement