ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ: ರೇಣುಕಾ
ಟಿ. ನರಸೀಪುರ: ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ ಎಂದು ಭೈರಾಪುರ ಜಿಪಂ ಕ್ಷೇತ್ರದ ಸದಸ್ಯೆ ರೇಣುಕಾ ನಾಗರಾಜು ಹೇಳಿದರು.
ಪಟ್ಟಣದ ಜಿಎಸ್ಎಫ್ ಕಾಲೋನಿಯಲ್ಲಿ ಜಿಪಂ ಅನುದಾನ 15.50 ಲಕ್ಷ ವೆಚ್ಚದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಭೈರಾಪುರ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯವಿರುವ ಯೋಜನೆಗಳಿಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ಭೈರಾಪುರ ಗ್ರಾಪಂ ಅಧ್ಯಕ್ಷೆ ಮುಭಿನ್ತಾಜ್, ಉಪಾಧ್ಯಕ್ಷ ಪುಟ್ಟು, ಸದಸ್ಯರಾದ ಕರಿಯಪ್ಪ, ನಾಗರಾಜು, ಸೋಮಶೇಖರ್, ಹೇಮಂತ್ಕುಮಾರ್, ಮಿಥುನ್, ಲಕ್ಷ್ಮೀ, ರೇಣುಕ, ಭಾಗ್ಯಮ್ಮ, ನಾಗರಾಜು, ಎ.ಜೆ. ವೆಂಕಟೇಶ್, ಗುತ್ತಿಗೆದಾರ ಪಾಲಾಕ್ಷ, ಮುಖಂಡ ಮಹದೇವಸ್ವಾಮಿ, ಶಿವಣ್ಣ ಇದ್ದರು.