ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗರ್ಗೇಶ್ವರಿ ವೈದ್ಯಾಧಿಕಾರಿಗೆ ಬೀಳ್ಕೊಡುಗೆ

Rashmi Kasaragodu
Updated On : 30 Jul 2014, 11:26 am

ಟಿ. ನರಸೀಪುರ: ತಾಲೂಕಿನ ಗರ್ಗೇಶ್ವರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ವೈದ್ಯಾಧಿಕಾರಿ ಡಾ. ದೇವರಾಜಮೂರ್ತಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ತಾಲೂಕಿನ ಗರ್ಗೇಶ್ವರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಐದಾರು ವರ್ಷಗಳ ಕಾಲ ಸಜ್ಜನಿಕೆ ವ್ಯಕ್ತಿತ್ವದ ವೈದ್ಯಾಧಿಕಾರಿಯಾಗಿ ಸಾಮಾನ್ಯ ಜನರ ನಾಡಿಮಿಡಿತವನ್ನರಿತು ಸೇವೆ ಸಲ್ಲಿಸಿದ ದೇವರಾಜಮೂರ್ತಿ ಅವರನ್ನು ಆಸ್ಪತ್ರೆಯ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟರು. ಸನ್ಮಾನ ಸ್ವೀಕರಿಸಿದ ಡಾ.ದೇವರಾಜಮೂರ್ತಿ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಎಸ್.ರಮೇಶ್ ಚಾವ್ಲಾ, ವೈದ್ಯಾಧಿಕಾರಿಗಳಾದ ಡಾ.ಎಸ್.ಸಿ.ಮಹದೇವಸ್ವಾಮಿ, ಡಾ. ವಿಶ್ವನಾಥ್, ಡಾ.ಚಂದ್ರಶೇಖರ್, ಡಾ.ಮಂಜುಪ್ರಸಾದ್, ಡಾ.ಸಂಜನಾ, ಡಾ.ಪ್ರಕಾಶ್, ಹಿರಿಯ ಆರೋಗ್ಯ ನಿರೀಕ್ಷಕ ಮಹದೇವಸ್ವಾಮಿ, ನೇತ್ರ ಪರೀಕ್ಷಕ ಆರ್.ಉಮೇಶ್ಕುಮಾರ್, ಸಿಬ್ಬಂದಿ ಪೂವಮ್ಮ, ಜಿ.ವಿ. ಕೃಷ್ಣ, ಪೂನಂ, ಸುಮ, ಖಾಲಿದ್ ಅಹಮದ್, ಮೀನಾಕ್ಷಿ, ವೀಣಾ, ನಾಗಮ್ಮ, ಮಣಿಯಮ್ಮ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement