ಸ್ಪರ್ಧೆಗಳಲ್ಲಿ ಕಂಪಲಾಪುರ ವಿದ್ಯಾರ್ಥಿಗಳು ಮೇಲುಗೈ
ಪಿರಿಯಾಪಟ್ಟಣ : ತಾಲೂಕಿನ ರಾವಂದೂರು ಗ್ರಾಮದಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಂಪಲಾಪುರ ಗ್ರಾಮದ ಶ್ರೀ ನಾಗ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನಾನಾ ಸ್ಫರ್ಧೆಗಳಲ್ಲಿ ಮೇಲುಗೈ ಸಾಧಿಸಿದ್ದಾರೆ.
ಪಥಸಂಚಲನ: ಪ್ರಥಮ, ಬಾಲಕರ ವಿಭಾಗದ ಖೋಖೋ- ಪ್ರಥಮ, 4್ಢ100 ರಿಲೇ- ಪ್ರಥಮ, ತಟ್ಟೆ ಎಸೆತ-ದ್ವೀತಿಯ, ಗುಂಡು ಎಸೆತ-ತೃತೀಯ, 200 ಮೀ. ಓಟ-ದ್ವಿತೀಯ, ಬಾಲಕೀಯರ ವಿಭಾಗದಲ್ಲಿ ವಾಲಿಬಾಲ್-ದ್ವಿತೀಯ, ತಟ್ಟೆ ಎಸೆತ-ಪ್ರಥಮ, ಗುಂಡು ಎಸೆತ-ತೃತೀಯ ಸ್ಥಾನ ಗಳಿಸಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ನಟರಾಜ್, ದೈಹಿಕ ಶಿಕ್ಷಣ ಶಿಕ್ಷಕ ಸ್ವಾಮಿಗೌಡ ಇದ್ದರು. ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿರುವ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಕೆ. ವಿ. ಜಯರಾಂ, ಮುಖ್ಯ ಶಿಕ್ಷಕ ಚಂದ್ರಶೇಖರ್ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.