ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲೆಟ್ಸ್ ಡು ಇಟ್‌ನಿಂದ ಜಾಥಾ

Rashmi Kasaragodu
Updated On : 4 Jun 2014, 1:15 am

ಮೈಸೂರು: ಲೆಟ್ಸ್ ಡು ಇಟ್ ಮೈಸೂರು ಸಂಸ್ಥೆಯು ಜೂ.5 ರಂದು ಪರಿಸರ ದಿನಾಚರಣೆ ಅಂಗವಾಗಿ ಜಾಥಾ ಆಯೋಜಿಸಿದೆ.
ಜೆಎಲ್‌ಬಿ ರಸ್ತೆಯ ಪ್ರವಾಸೋದ್ಯಮ ಕಚೇರಿಯಿಂದ ಆರಂಭವಾಗುವ ಜಾಥಾ, ರೈಲು ನಿಲ್ದಾಣ, ಆಯುರ್ವೇದ ಕಾಲೇಜು ವೃತ್ತ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ ಮೂಲಕ ಮತ್ತೆ ಪ್ರವಾಸೋದ್ಯಮ ಇಲಾಖೆ ಕಚೇರಿ ತಲುಪಲಿದೆ. ಈ ಜಾಥಾದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಡಾಮಿನೋಸ್ ಫಿಜಾ, ವಿಪ್ರೊ, ದೈಹಿಕ ಶಿಕ್ಷಣ ವಿದ್ಯಾರ್ಥಿಗಳು ಮತ್ತು ಇತರೆ ಸಂಘ ಸಂಸ್ಥೆಯ ಸಿಬ್ಬಂದಿ, ಪ್ರಮತಿ ಶಾಲೆ ಮಕ್ಕಳು ಭಾಗವಹಿಸುವರು ಎಂದು ಸಂಸ್ಥೆಯ ಸ್ವಯಂ ಸೇವಕ ಶಿವಶಂಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂ.8ರ ಬೆಳಗ್ಗೆ 6 ರಿಂದ 10 ರವರೆಗೆ ನಗರದಲ್ಲಿ ಮಹಾ ಸ್ವಚ್ಛತಾ ದಿನ ಆಯೋಜಿಸಿದ್ದು, ಅಂದು ನಗರದ ಪ್ರಮುಖ 50 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಇದಕ್ಕೆ ಸಾರ್ವಜನಿಕರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು. ಪ್ರಮುಖವಾಗಿ ಅರಮನೆ, ನಗರ ಪಾಲಿಕೆ ಸುತ್ತಮುತ್ತ, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಆಸ್ಪತ್ರೆ, ಶಾಲಾ- ಕಾಲೇಜು, ಚಾಮರಾಜ ಜೋಡಿ ರಸ್ತೆ, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಉದಯಗಿರಿ ಮುಖ್ಯರಸ್ತೆ ಮುಂತಾದ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದಾಗಿ ವಿವರಿಸಿದರು.
ಸಂಸ್ಥೆಯ ವಿವೇಕ್, ಕಿರಣ್, ಸುಧೀಂದ್ರ ಮತ್ತು ಸುಧೀರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement