ಕಾಡು ಹಂದಿ ದಾಳಿ: ಬಿತ್ತನೆ ಬೀಜ ನಾಶ
ಅಂತರಸಂತೆ: ಎಚ್.ಡಿ.ಕೋಟೆ ತಾಲೂಕು ಅಂತರಸಂತೆ ಗ್ರಾಮದ ಸಮೀಪ ಸೋಗಹಳ್ಳಿ ಗ್ರಾಮದಲ್ಲಿ ಕಾಡು ಹಂದಿಗಳು ದಾಳಿ ಮಾಡಿ ಬಿತ್ತನೆ ಬೀಜ ನಾಶಪಡಿಸಿರುವ ಘಟನೆ ಗುರುವಾರ ನಡೆದಿದೆ. ಗ್ರಾಮದ ಸ.ನಂ 67 ರಲ್ಲಿ ಎಸ್.ಬಿ.ತಿಮ್ಮನಾಯಕ ಅವರ ಜಮೀನು 1 ಎಕರೆ, ವೆಂಕಟಸ್ವಾಮಿನಾಯಕ ಅವರ ಜಮೀನು, ಪಂಡಿತ ಆರಾಧ್ಯ ಎಂಬವರ ಜಮೀನು, ಉದಯಕುಮಾರ್ ಅವರಿಗೆ ಸೇರಿದ 5 ಎಕರೆ ಜಮೀನುಗಳಿಗೆ ಕಾಡುಹಂದಿಗಳು ದಾಳಿ ನಡೆಸಿವೆ. ಬಿತ್ತನೆ ಮಾಡಿದ್ದ ಮುಸುಕಿನ ಜೋಳದ ಕಾಳುಗಳನ್ನು ಭೂಮಿ ಅಗೆದು ತಿಂದು ಹಾಕಿವೆ. ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.