ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜೀವ ಸಂಕುಲ ಉಳಿಯಲಿ

Rashmi Kasaragodu
Updated On : 6 Jun 2014, 1:48 am

ಪಿರಿಯಾಪಟ್ಟಣ: ಪರಿಸರ ನಾಶ ಮಾಡದೆ ಪೋಷಿಸಿಕೊಂಡು ಹೋಗಬೇಕು ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು. ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದ ಅವರು, ಇಂದು ರೋಗ ರುಜಿನ ಹೆಚ್ಚಾಗುತ್ತಿದ್ದು, ಇದರಿಂದ ಪ್ರತಿಯೊಬ್ಬರು ನರಳುವಂತಾಗಿದೆ. ನಮ್ಮ ಪರಿಸರವನ್ನು ನಾವೇ ಕೈಯಾರ ನಾಶಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ. ಜೀವ ಸಂಕುಲ ಉಳಿಯಬೇಕಾರದರೆ ಪರಿಸರದ ಉಳಿವು ಅಗತ್ಯ ಎಂದು ತಿಳಿಸಿದರು. ಆರ್‌ಎಫ್‌ಒ ಎಂ.ಎಸ್. ಚಿಣ್ಣಪ್ಪ ಮಾತನಾಡಿ, ದೇಶದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಕಡಿಮೆಯಾಗುತ್ತಿದ್ದು, ಇದಕ್ಕೆ ನಾವೇ ಕಾರಣರು. ಮರಗಳನ್ನು ಕಡಿಯಲು ಮುಂದಾಗುವುದರಲ್ಲಿ ಇರುವ ಉತ್ಸಾಹ ಮರಗಳನ್ನು ಬೆಳಸುವಲ್ಲಿ ಇಲ್ಲವಾಗಿದೆ. ಪರಿಸರ ಉಳಿಸಲು ಪ್ರತಿಯೊಬ್ಬರು ತಮ್ಮ ನೆಲೆಗಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಕುಮಾರ್, ಕಾರ್ಯದರ್ಶಿ ಹರೀಶ್, ಡಿಆರ್‌ಎಫ್‌ಒಗಳಾದ ಅರ್ಜುನ, ರಶ್ಮಿ, ಅರಣ್ಯ ರಕ್ಷಕ ರವಿನಾಯಕ, ಗೋವಿಂದೇಗೌಡ, ಹರೀಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement