ಪರಿಸರ ರಕ್ಷಿಸಿ
ಟಿ. ನರಸೀಪುರ: ಮರಗಳನ್ನು ಸಂರಕ್ಷಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮನುಷ್ಯನಿಗೆ ಇರಬೇಕಾದ ನೀರು, ಗಾಳಿ, ಆಹಾರದ ಕೊರತೆಯಿಂದಾಗಿ ಆರೋಗ್ಯದ ಸಮಸ್ಯೆ ಹೆಚ್ಚಾಗುವುದೆಂದು ಎಂದು ಕಿರಿಯ ಶ್ರೇಣಿ ನ್ಯಾಯಾಧಿಶ ಬಿ.ಜಿ. ದಿನೇಶ್ ಹೇಳಿದ್ದಾರೆ. ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾಹನ ಬಳಕೆ ಹೆಚ್ಚಾಗಿರುವುದರಿಂದ ವಾಯುಮಾಲಿನ್ಯ ಹದಗೆಡುತ್ತಿದ್ದು, ಮನುಷ್ಯನಿಗೆ ಬೇಕಾದ ಉತ್ತಮ ಗಾಳಿ, ನೀರು, ಆಹಾರದ ತೊಂದರೆ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಇಂದಿನಿಂದಲ್ಲೇ ಪ್ರತಿಯೊಬ್ಬರು ಮರಗಳನ್ನು ಸಂರಕ್ಷಿಸಬೇಕೆಂದು ತಿಳಿಸಿದರು. ಇದೇ ವೇಳೆ ತಹಸೀಲ್ದಾರ್ ರಾಮಪ್ಪ, ವಕೀಲರ ಸಂಘದ ಅಧ್ಯಕ್ಷ ನಾಗಭೂಷಣ್ ಮೂರ್ತಿ, ಸಹಾಯಕ ಸರ್ಕಾರಿ ಅಭಿಯೋಜಕಿ ಜಯಶ್ರೀ ಎಸ್.ಶಣೈ, ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ, ವಕೀಲರಾದ ರವಿಶಂಕರ್, ಶ್ರೀನಿಧಿ, ಉಮೇಶ್ ಇದ್ದರು.