ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಸಾಯನಿಕ ಕಡಿಮೆಗೊಳಿಸಿ

Rashmi Kasaragodu
Updated On : 6 Jun 2014, 1:48 am

ಹುಣಸೂರು: ಜಾಗತಿಕ ತಾಪಮಾನ ಸಮತೋಲನೆ ಕಾಪಾಡುವ ದೃಷ್ಟಿಯಿಂದ ರಾಸಾಯನಿಕ ಬಳಕೆಗೆ ಬದಲು ರೈತರು ಸಾವಯವ ಗೊಬ್ಬರ ಬಳಸುವ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಬೇಕು ಎಂದು ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಣ್ಣಗೌಡ ರೈತರಿಗೆ ಸೂಚಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಇಲಾಖೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರೈತರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಸಸಿ ವಿತರಿಸಿ ಮಾತನಾಡಿ, ಹೆಚ್ಚು ರಸಗೊಬ್ಬರ ಬಳಕೆಯಿಂದ ಪರಿಸರ ನಾಶವಾಗಿ, ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದರಿಂದ ಬೆಳೆಯುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಾರಕ ರೋಗಗಳು ಬರುತ್ತಿವೆ. ರೈತರು ಜೈವಿಕ ಗೊಬ್ಬರ ಬಳಸಿ ವ್ಯವಸಾಯ ಮಾಡಬೇಕು ಇದರಿಂದ ರೋಗ ಕಡಿಮೆ ಆಗಲಿದೆ ಎಂದರು. ಡಿಸಿಎಫ್ ಬಾಲಚಂದರ್ ಮಾತನಾಡಿದರು. ಎಸಿಎಫ್ ಪ್ರಸನ್ನಕುಮಾರ್, ಆರ್‌ಎಫ್‌ಒ ಶಿವರಾಮ್, ವನಪಾಲಕ ನಂದಕುಮಾರ್, ರಾಧ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement