ರೋಟರಿ ವಿದ್ಯಾಸಂಸ್ಥೆ
ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಮತ್ತು ಪಟ್ಟಣದ ರೋಟರಿ ಸಂಸ್ಥೆ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಪುರಸಭೆ ಪರಿಸರ ಎಂಜಿನಿಯರ್ ರವಿಕುಮಾರ್ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ವಿಶ್ವದೆಲ್ಲೆಡೆ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಇದಕ್ಕೆ ಮಾನವ ತನ್ನ ಸ್ವಾರ್ಥಕ್ಕಾಗಿ ಭೂಮಿ, ವಾಯು, ಜಲಮಾಲಿನ್ಯ ಮಾಡಿ, ಪರಿಸರಕ್ಕೆ ದಕ್ಕೆ ತಂದಿದ್ದಾನೆ. ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಎಚ್ಚೆತ್ತುಕೊಂಡು ಪರಿಸರ ಸಂರಕ್ಷಿಸದಿದ್ದಲ್ಲಿ ವಿನಾಶದ ಅಂಚಿಗೆ ತಲುಪುತ್ತೇವೆ ಎಂದರು. ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ನ ಕಾರ್ಯಕ್ರಮಾಧಿಕಾರಿ ಜಯಶ್ರೀ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್, ಶಾಲಾ ಸಮಿತಿ ಕಾರ್ಯದರ್ಶಿ ಹನಗೋಡು ನಟರಾಜ್, ಕಾರ್ಯದರ್ಶಿ ಶಿವಕುಮಾರ್, ವಲಯ ಸೇನಾನಿ ಸಚ್ಚಿತ್, ಮುಖ್ಯ ಶಿಕ್ಷಕ ರೇಣುಕಾ ಪ್ರಸಾದ್, ಪುರಸಭೆ ಆರೋಗ್ಯಾಧಿಕಾರಿ ಸತೀಶ್ ಇದ್ದರು.