ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಕ್ಷಕರ ಗೈರಿಂದ ಶಿಕ್ಷಣ ಗುಣಮಟ್ಟ ಕುಸಿತ

Rashmi Kasaragodu
Updated On : 6 Jun 2014, 1:50 am

ನಂಜನಗೂಡು: ರಾಜ್ಯದ ಒಟ್ಟು 48 ಸಾವಿರ ಶಾಲೆಗಳಲ್ಲಿ ಶೇ.30 ರಷ್ಟು ಶಾಲೆಗಳು ಶಿಕ್ಷಕರ ಗೈರು ಹಾಜರಿಯಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ್ ಖತ್ರಿ ತಿಳಿಸಿದರು.
ತಾಲೂಕಿನ ಸುತ್ತೂರಿನಲ್ಲಿ ಗುರುವಾರ ಶಿಕ್ಷಕರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಒಳ್ಳೆಯ ಹಾಗೂ ಕೆಟ್ಟ ಶಾಲೆ ಇದೆ. ಎಲ್ಲಿ ಒಳ್ಳೆಯ ಶಿಕ್ಷಕರು ಇರುತ್ತಾರೊ ಅದು ಸಹಜವಾಗಿಯೇ ಒಳ್ಳೆಯ ಶಾಲೆ. ಸರ್ಕಾರ ನೀಡುತ್ತಿರುವ ಸೌಲಭ್ಯದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‌ನ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ, ಶಿಕ್ಷಕರು ತಮ್ಮ ವೃತ್ತಿ, ವಿಷಯ ಮತ್ತು ವಿದ್ಯಾರ್ಥಿಗಳ ಮೇಲೆ ಪ್ರೀತಿಯ ಬಗ್ಗೆ ಚಿಂತನೆ ಹೊಂದಿದಾಗ ಒಳ್ಳೆಯ ಶಿಕ್ಷಕರಾಗಲು ಸಾಧ್ಯ. ಒಬ್ಬ ಶಿಕ್ಷಕ ವೃತ್ತಿಯಲ್ಲಿ ಆಸಕ್ತಿಹೀನನಾದಲ್ಲಿ ಹತ್ತು ಸಾವಿರ ಮಕ್ಕಳು ಅಪಾಯಕ್ಕೆ ಸಿಲುಕುತ್ತಾರೆ ಎಂದರು.
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಮಾತನಾಡಿ, ಶಿಕ್ಷಣ ಒಂದು ವ್ಯವಹಾರವಾಗಿದೆ. ಅದನ್ನು ಬಿಟ್ಟು ಒಬ್ಬ ಒಳ್ಳೆಯ ವ್ಯಕ್ತಿಯನ್ನು ರೂಪಿಸಲು ಸಾಧ್ಯ ಎಂದರು.
ಜ್ಞಾನ ಯೋಗಾಶ್ರವುದ ಶ್ರೀ ಸಿದ್ಧೇಶ್ವರ ಸ್ವಾಮಿಜಿ ಮತ್ತು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶಿರ್ವಚನ ನೀಡಿದರು. ಬಿಇಒ ಪುರುಷೋತ್ತಮ, ಕೆ.ಬಿ. ರವೀಂದ್ರ, ಕನ್ನಡ ಪ್ರಾಧ್ಯಾಪಕ ಮ.ಗು. ಬಸವಣ್ಣ, ಸಿದ್ದಲಿಂಗು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement