ಹಸಿರಿನಿಂದ ಮನುಜ ನೆಮ್ಮದಿ
ಪಿರಿಯಾಪಟ್ಟಣ: ಪರಿಸರ ಮನುಷ್ಯನ ಜೀವಿತದ ಮೂಲ ನೆಲೆ. ಪರಿಸರ ಉಳಿದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಬೆಟ್ಟದಪುರ ಅನಿಕೇತನ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಡಾ.ಜೆ. ಸೋಮಣ್ಣ ಹೇಳಿದರು.
ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಡಿದ ಅವರು, ಭೂಮಿಯ ಮೇಲೆ ಮನುಷ್ಯನಂತೆ ಇತರೆ ಜೀವಿಗಳಿಗೂ ಬದುಕುವ ಹಕ್ಕಿದೆ. ಪರಿಸರ ಜೀವಜಾಲಗಳ ನಡುವೆ ಪರಿಸರದ ಅನ್ಯೋನ್ಯ ಸಂಪರ್ಕ ಕಲ್ಪಿಸಿದೆ. ಈ ಕೊಂಡಿ ಕಳಚಿದರೆ ಪರಿಸರದಲ್ಲಿ ಅಸಮತೋಲನ ಉಂಟಾಗಿ ಹಲವು ಏರುಪೇರುಗಳಾಗಲಿವೆ ಎಂದು ತಿಳಿಸಿದರು. ಪ್ರಾಂಶುಪಾಲ ಬಸವರಾಜು ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸಿದರು. ಕಾಲೇಜಿನ ಸಿಬ್ಬಂದಿ ಸೀನಿಯಾ, ವೆಂಕಟಲಕ್ಷ್ಮಮ್ಮ, ಪೋಷಕರಾದ ಕುಬೇರ ಇದ್ದರು.