ಹಸಿರೇ ಉಸಿರು ಗಿಡವ ಬೆಳೆದಾಗ
ಕ.ಪ್ರ.ವಾರ್ತೆ ಬೈಲುಕುಪ್ಪೆ ಜೂ.5
ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಗುರೂಜಿ ಕರ್ಮಪ್ಪ ತಿಳಿಸಿದರು. ಸಮೀಪದ ಕೊಪ್ಪ ಗ್ರಾಮದ ಸಾರ್ವಜನಿಕ ಆಸ್ಪತ್ರೆಯಿಂದ ಕಾವೇರಿ ದಡದವರೆಗೆ ವಿಶ್ವ ಪರಿಸರ ದಿನದ ಅಂಗವಾಗಿ ಸ್ವಚ್ಛತಾ ಜಾಥಾಕ್ಕೆ ಜಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿ ವಿಕೋಪದ ಬಗ್ಗೆ ಜಾಗೃತಿ ಮೂಡಿಸುವುದು, ಭೂ ಕುಸಿತಕ್ಕೆ ಒಳಗಾಗುವ ಜಾಗಗಳಲ್ಲಿ ಮರಗಿಡ ನೆಡುವುದು, ನದಿಗಳಿಗೆ ತ್ಯಾಜ್ಯ ವಿಸರ್ಜಿಸದಿರುವುದು. ವೈಯಕ್ತಿಕವಾಗಿ ಪ್ರತಿಯೊಬ್ಬರು ಒಂದೊಂದು ಗಿಡ ನೆಡುವಂತ ಮನೋಭಾವ ಮೂಡಿಸಬೇಕು ಎಂದರು. ಪರಿಸರ ಪ್ರೇಮಿ ಬಸವೇಗೌಡ, ನಿವೃತ್ತ ಇನ್ಸ್ಪೆಕ್ಟರ್ ಕೆ.ವಿ.ಅಣ್ಣಯ್ಯ, ಬಾರವಿ ರವಿಚಂದ್ರ, ಕನ್ನಡ ಸಂಘ ರವಿಚಂದ್ರ, ವಿಜೀಂದ್ರ ಜಗಸ್ವಾಮಿ ಇದ್ದರು.