ಕರಕುಶಲ ಮೇಳಕ್ಕೆ ಚಾಲನೆ
ಮೈಸೂರು: ನಂಜರಾಜ ಬಹದ್ದೂರ್ ಛತ್ರದಲ್ಲಿ ಪೂಂಪುಹಾರ್ ಸಂಸ್ಥೆಯು ಆಯೋಜಿಸಿರುವ ಕರಕುಶಲ ವಸ್ತುಗಳ ಮಾರಾಟ ಮೇಳವು ಶುಕ್ರವಾರ ಆರಂಭವಾಯಿತು.
ತಮಿಳುನಾಡು ಕರಕುಶಲ ಅಭಿವೃದ್ಧಿ ನಿಗಮ ಆಯೋಜಿಸಿರುವ ಈ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಮೇಯರ್ ಎನ್.ಎಂ. ರಾಜೇಶ್ವರಿ, ಪುರಾತನ ಶೈಲಿಯ ವಿಗ್ರಹಗಳು, ವೈವಿಧ್ಯಮಯ ದೀಪಗಳು ಹಾಗೂ ಮೈಸೂರು ಸಾಂಪ್ರದಾಯಿಕ ಶೈಲಿಯ ದೇವರ ಪಟಗಳು ಹಾಗೂ ಮನೆಯಲ್ಲಿ ಸಂಗ್ರಹಿಸಿಡಬಹುದಾದ ವಸ್ತುಗಳು ಪ್ರದರ್ಶಿತವಾಗಿವೆ ಎಂದರು.
ಜೂ.15 ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ 8 ರವರೆಗೆ ತೆರೆದಿರುತ್ತದೆ.