ನಾನಾ ತರಬೇತಿ, ಶಿಬಿರಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ
ಮೈಸೂರು: ವಿಜಯನಗರದಲ್ಲಿರುವ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಸಂಸ್ಥೆಯು ಚಿತ್ರಕಲಾ ತರಬೇತಿ ಹಾಗೂ ಪದವಿ ಕೋರ್ಸುಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಎಸ್ಸೆಸ್ಸೆಲ್ಸಿ ಪಾಸಾದ, ಪಿಯುಸಿ ಪಾಸಾದ ಅಥವಾ ಫೇಲಾದ ವಿದ್ಯಾರ್ಥಿಗಳು ಚಿತ್ರಕಲೆಯಲ್ಲಿ ಫೌಂಡೇಷನ್ ಕೋರ್ಸ್, ಪೇಟಿಂಗ್, ಅಪ್ಲೈಡ್ ಆರ್ಟ್‌ನಲ್ಲಿ ಪದವಿ ಮತ್ತು ಚಿತ್ರಕಲಾ ಶಿಕ್ಷಕರ ತರಬೇತಿ ಕೋರ್ಸಿಗೆ ಪ್ರವೇಶಾತಿ ಪಡೆಯಬಹುದು. ಆಸಕ್ತರು ಮೊ. 98447 75238 ಸಂಪರ್ಕಿಸಿ. ಚಾಮರಾಜ ಮೊಹಲ್ಲಾದಲ್ಲಿರುವ ನವೋದಯ ಫೌಂಡೇಷನ್‌ನಲ್ಲಿ ಯುಪಿಎಸ್‌ಸಿ ವತಿಯಿಂದ ನಡೆಸುವ ಐಎಎಸ್, ಐಪಿಎಸ್ ಪರೀಕ್ಷೆಗೆ ಜೂ.10 ರಿಂದ 28 ರವರೆಗೆ 18 ದಿನಗಳ ಕಾರ್ಯಾಗಾರ ನಡೆಸಲಿದ್ದು, ಆಸಕ್ತರು 96860 72224 ಸಂಪರ್ಕಿಸಬಹುದು. ಶ್ರೀ ಲಕ್ಷ್ಮೀ ಮಹಿಳಾ ತರಬೇತಿ ಸಂಸ್ಥೆಯು ಜೂ.19 ರಿಂದ ಮಹಿಳೆಯರಿಗೆ ಫ್ಯಾಷನ್ ಡಿಸೈನಿಂಗ್, ಬ್ಯೂಟಿಷಿಯನ್, ಟೈಲರಿಂಗ್ ತರಬೇತಿ ನೀಡಲಿದ್ದು, ಮೊ. 99459 88284 ಸಂಪರ್ಕಿಸಿ. ರೋಟರಿ ಮೈಸೂರು ಮತ್ತು ಬೆಳಕು ಫೌಂಡೇಷನ್ ಸಂಯುಕ್ತವಾಗಿ ಜೂ.9ರಿಂದ ವ್ಯಕ್ತಿತ್ವ ವಿಕಸನ ಶಿಬಿರ ಏರ್ಪಡಿಸಿದೆ. ಮೊ. 98441 18322 ಸಂಪರ್ಕಿಸಿ.
ನಿರುದ್ಯೋಗಿಗಳೇ 11ರಂದು ಇಲ್ಲಿದೆ ಉದ್ಯೋಗ ಮೇಳ
ಮೈಸೂರು: ಸರಸ್ವತಿಪುರಂನಲ್ಲಿರುವ ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಕಚೇರಿ ಆವರಣದಲ್ಲಿ ಜೂ.11 ರಂದು ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಈ ಮೇಳದಲ್ಲಿ 18 ರಿಂದ 35 ವರ್ಷ ವಯೋವುತಿಯ ಎಸ್ಸೆಸ್ಸೆಲ್ಸಿ, ಪಿಯುಸಿ, ಬಿ.ಎ, ಬಿ.ಎಸ್ಸಿ, ಬಿಬಿಎಂ, ಬಿ.ಎಸ್ಸಿ, ನರ್ಸಿಂಗ್, ಡಿಪ್ಲೊಮಾ ನರ್ಸಿಂಗ್ ಹಾಗೂ ಯಾವುದೇ ಪದವಿಯಲ್ಲಿ ತೇರ್ಗಡೆಯಾದವರು, ಜೆಒಸಿ, ಐಟಿಐ, ಡಿಪ್ಲೊಮಾ ಪದವಿಗಳಲ್ಲಿ ತೇರ್ಗಡೆಯಾದವರು ಭಾಗವಹಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ಮತ್ತು ತರಬೇತಿ ಇಲಾಖೆ ಸಹಾಯಕ ನಿರ್ದೇಶಕ ಸಿ.ವಿಶ್ವನಾಥ್ ತಿಳಿಸಿದ್ದಾರೆ. ಹಿಂದೂಜಾ ಗ್ಲೋಬಲ್ ಸಲ್ಯೂಷನ್‌ನ 200 ಹುದ್ದೆಗಳು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್‌ನಲ್ಲಿ 35 ಸ್ಟಾಫ್ ನರ್ಸ್ ಹುದ್ದೆಗಳು, ಬಿ.ಕೆ.ಎಂಟರ್‌ಪ್ರೈಸಸ್, ಎನ್.ಜಿ. ಸ್ಟಾಫಿಂಗ್‌ನ ಫ್ಲಿಪ್‌ಕಾರ್ಟ್ ಕಂಪನಿಯಲ್ಲಿ ಹುದ್ದೆಗಳು, ವುಡ್‌ಲ್ಯಾಂಡ್ ಕಂಪನಿ ಹಾಗೂ ಐಎಫ್‌ಬಿಐ ಕಂಪನಿಯವರ ಬ್ಯಾಂಕಿಂಗ್ ಕ್ಷೇತ್ರದ 30 ಹುದ್ದೆಗಳ ಭರ್ತಿಗೆ ಅಂದು ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.