ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ.ಜಾತಿ ಹಾಸ್ಟೆಲ್ ಕಾಮಗಾರಿಗೆ ಚಾಲನೆ

Rashmi Kasaragodu
Updated On : 8 Jun 2014, 2:17 am

ಎಚ್.ಡಿ. ಕೋಟೆ: ಪಟ್ಟಣದ ಪ.ಜಾತಿ ವಿದ್ಯಾರ್ಥಿನಿಲಯದ ಮೊದಲನೆಯ ಮಹಡಿ ನಿರ್ಮಾಣಕ್ಕೆ ಶಾಸಕ ಎಸ್.ಚಿಕ್ಕಮಾದು ಗುದ್ದಲಿಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
ಮೊದಲನೇ ಅಂತಸ್ತಿನಲ್ಲಿ ಸುಮಾರು 14 ಕೊಠಡಿಗಳು ಹಾಗೂ ಸ್ನಾನ ಗೃಹ ಒಳಗೊಂಡಿದ್ದು, ಸುಮಾರು 89 ಲಕ್ಷಗಳಲ್ಲಿ ಕಾಮಗಾರಿಯನ್ನು ಭೂ ಸೇನಾ ನಿಗಮದವರು ನಿರ್ಮಿಸುವರು. ವಿದ್ಯಾರ್ಥಿನಿಲಯದಲ್ಲಿ ಈಗಿನ ನಿಲಯದಲ್ಲಿ 50 ಮಂದಿ ಮಾತ್ರ ಇರಲು ಸಾಧ್ಯವಾಗುತ್ತಿದ್ದು, ಈಗಾಗಲೇ ನಿಲಯದಲ್ಲಿ ಸುಮಾರು 120 ಮಂದಿ ಪ್ರವೇಶ ಪಡೆದಿರುವುದರಿಂದ ಹೆಚ್ಚುವರಿ ಕೊಠಡಿ ನಿರ್ಮಿಸಲಾಗುತ್ತಿದೆ. ಅದೇ ರೀತಿಯಲ್ಲಿ ಹುಣಸೂರು-ಬೇಗೂರು ರಸ್ತೆಯ ಪದವಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸುಮಾರು 98 ಲಕ್ಷ ವೆಚ್ಚದಲ್ಲಿ, 5 ಕೊಠಡಿಗಳಿಗೂ ಗುದ್ದಲಿಪೂಜೆ ನೆರವೇರಿಸಲಾಗಿದೆ. ಪ್ರಥಮ ದರ್ಜೆ ಕಾಲೇಜು ಜಾಗದಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ 4 ಕೋಟಿ ವೆಚ್ಚದಲ್ಲಿ ಆದರ್ಶ ಶಾಲೆ ನಿರ್ಮಿಸಲು ಈಗಾಗಲೇ ಉದ್ದೇಶಿಸಲಾಗಿದೆ. ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ತಮ್ಮ ಅವಧಿಯಲ್ಲಿ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಮಲ್ಲೇಶ್ವರಿ, ಉಪಾಧ್ಯಕ್ಷೆ ಪುಟ್ಟಾಲಮ್ಮ, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಪಪಂ ಉಪಾಧ್ಯಕ್ಷೆ ಸುಹಾಸಿನಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಿಂಧ್ಯಾ, ಭೂಸೇನಾ ನಿಗಮದ ಪರಮೇಶ್ವರ್, ಮುಖಂಡರಾದ ಎಂ.ಸಿ. ದೊಡ್ಡನಾಯಕ, ಚಾ. ನಂಜುಂಡಮೂರ್ತಿ, ಶಂಭುಗೌಡ, ವೆಂಕಟೇಶ್, ಚಂದ್ರು, ವೆಂಕಟೇಶ್, ಸುರೇಂದ್ರ, ನಾರಾಯಣಗೌಡ, ಶಿವಯ್ಯ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement