ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಿಂಚಣಿ ವಿಳಂಬ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

Rashmi Kasaragodu
Updated On : 8 Jun 2014, 2:14 am

ಮೈಸೂರು: ವೃದ್ಧಾಪ್ಯ ವೇತನ (ಪಿಂಚಣಿ) ದೊರೆಯುವಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಮೈಸೂರು ತಾಲೂಕು ಜಯಪುರ ಹೋಬಳಿ ಮದ್ದೂರು ಮತ್ತು ಮದ್ದೂರು ಹುಂಡಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು. ಜಯಪುರ ನಾಡಕಚೇರಿಯಿಂದ ನೀಡಿದ್ದ ಪಿಂಚಣಿ ಆದೇಶದ ಪ್ರತಿಯಲ್ಲಿ ನಮೂದಿಸಿರುವ ದಿನಾಂಕದಿಂದ ಪಿಂಚಣಿ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಪಿಂಚಣಿ ಬರುವುದು 2-3 ತಿಂಗಳ ವಿಳಂಬವಾಗುತ್ತಿದೆ. ಬಹುತೇಕ ಫಲಾನುಭವಿಗಳಿಗೆ 6 ತಿಂಗಳಿಂದ ವರ್ಷವಾದರೂ ಪಿಂಚಣಿ ದೊರೆತಿಲ್ಲ ಎಂದು ಆರೋಪಿಸಿದರು. ಪಿಂಚಣಿ ಸೌಲಭ್ಯ ಸರ್ಕಾರದ ಸಕಾಲ ಯೋಜನೆಗೆ ಒಳಪಟ್ಟರೂ ನಿಗದಿತ ನಿಯಮ ಪಾಲಿಸದೇ ವಿಳಂಬ ಮಾಡುತ್ತಿರುವುದು ಸರಿಯಲ್ಲ. ನಾಡಕಚೇರಿ ಮತ್ತು ಖಜಾನೆ ನಡುವೆ ವಿಭಿನ್ನ ವ್ಯವಸ್ಥೆಯೇ ಇದಕ್ಕೆ ಕಾರಣ ಎಂದು ಅವರು ಕಿಡಿಕಾರಿದರು. ವೃದ್ಧ ಪಿಂಚಣಿದಾರರಿಗೆ ಆದೇಶ ನೀಡಿದ ದಿನದಿಂದಲೇ ಪಿಂಚಣಿ ದೊರೆಯಬೇಕು. ಬಾಕಿ ಇರುವ ಪಿಂಚಣಿ ಪಾವತಿಸಲು ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು. ಸಮಾಜ ಸೇವಕ ಭಾಸ್ಕರ್ ಶರ್ಮ, ಪಿಂಚಣಿ ಫಲಾನುಭವಿಗಳಾದ ಹಿರಿಗಂಡು, ಸಣ್ಣ ತಾಯಮ್ಮ, ಚಿನ್ನಮ್ಮ ಇತರರಿದ್ದರು.

ಆಶಾ ಕಾರ್ಯಕರ್ತೆಯರ ಬಾಕಿ ಹಣ ಪಾವತಿಸುವಂತೆ ಆಗ್ರಹ

ಮೈಸೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 35 ಸಾವಿರಕ್ಕೂ ಹೆಚ್ಚು ಮಂದಿ ಆಶಾ ಕಾರ್ಯಕರ್ತೆಯರಿಗೆ ನೀಡಬೇಕಾದ ಮ್ಯಾಚ್ ಗ್ರ್ಯಾಂಟ್ ಹಣವನ್ನು ಬಾಕಿ ಉಳಿಸಿಕೊಂಡಿದ್ದು ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸರ್ಕಾರವನ್ನು ಆಗ್ರಹಿಸಿದೆ. ಸಂಘದ ನಿರಂತರ ಹೋರಾಟದ ಫಲವಾಗಿ ಪ್ರೋತ್ಸಾಹ ಧನದ ಮೊದಲ ಕಂತಿನ ಹಣವನ್ನು ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಮೈಸೂರು ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಗ್ರ್ಯಾಂಟ್ ಹಣ ನೀಡಬೇಕು. ಕಾರ್ಯಕರ್ತೆಯೊಬ್ಬರಿಗೆ ಪ್ರಯಾಣ ಭತ್ಯೆ, ಪಿಎಚ್‌ಸಿ ಮೀಟಿಂಗ್, ವಿಎಚ್‌ಸಿ ಮೀಟಿಂಗ್, ವಿಎಚ್‌ಎನ್‌ಡಿ ಮೀಟಿಂಗ್‌ಗಳ ಪ್ರೋತ್ಸಾಹ ಧನ ಸೇರಿದಂತೆ ಒಟ್ಟು 2900 ಹಣ ಬರಬೇಕಾಗಿದೆ ಎಂದು ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಪಿ.ಎಸ್. ಸಂಧ್ಯಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement