ಕಂಪ್ಯೂಟರ್ ಹೆಚ್ಚು ಬಳಕೆ ಸರಿಯಲ್ಲ: ಮುಕ್ತಿದಾನಂದಜಿ
ಮೈಸೂರು: ವೃದ್ಧರಾದಿಯಾಗಿ ಎಲ್ಲರೂ ಕಂಪ್ಯೂಟರ್ಗಳ ಮುಂದೆ ಸದಾ ಕಾರ್ಯ ನಿರ್ವಹಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಹೇಳಿದರು. ರಾಮಕೃಷ್ಣ ಸೇವಾ ಸಂಘ ಹಾಗೂ ಪ್ರಿಸ್ಟೈನ್ ಆಸ್ಪತ್ರೆ ವತಿಯಿಂದ ಭಾನುವಾರ ರಾಮಕೃಷ್ಣ ವಿದ್ಯಾಕೇಂದ್ರದ ಶಾರದಾ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಧಿವಾತ ಹಾಗೂ ನರ ಸಂಬಂಧಿ ಸಮಸ್ಯೆಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಶಾಂತಿ, ತಾಳ್ಮೆ, ನಗು, ಏಕಾಗ್ರತೆ, ವ್ಯಾಯಾಮ, ಯೋಗ ಹಾಗೂ ಸದಾ ಚಟುವಟಿಕೆಯಿಂದ ಕೂಡಿದವರಿಗೆ ಆರೋಗ್ಯ ಉತ್ತಮವಾಗಿ ಇರುತ್ತದೆ. ಆದರೆ ವೃದ್ಧರಾದಿಯಾಗಿ ಎಲ್ಲರೂ ಕಂಪ್ಯೂಟರ್ಗಳಲ್ಲಿ ಕಾಲ ಕಳೆಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲಸದ ಜೊತೆಗೆ ಆರೋಗ್ಯದೆಡೆಗೂ ಗಮನ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು. ಪ್ರಿಸ್ಟೈನ್ ಆಸ್ಪತ್ರೆ ಹಿರಿಯ ಸಲಹೆಗಾರ ಡಾ.ಎಚ್.ಎಂ. ಪ್ರಸನ್ನ ಮಾತನಾಡಿದರು. ರಾಮಕೃಷ್ಣ ಸೇವಾ ಸಂಘ ಅಧ್ಯಕ್ಷ ಎಂ. ಪಾಪೇಗೌಡ, ಪ್ರಿಸ್ಟೈನ್ ಆಸ್ಪತ್ರೆ ಹಿರಿಯ ಸಲಹೆಗಾರ ಡಾ. ಅನಂತ ಕಿಷನ್, ಮಕ್ಕಳ ತಜ್ಞ ಡಾ. ಜೆ.ವಿ. ನಾರಾಯಣ್ ಹಾಗೂ ರಂಗನಾಥ್ ಇದ್ದರು.