ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ
ಕ.ಪ್ರ. ವಾರ್ತೆ, ಹುಣಸೂರು, ಜೂ.8
ಮಾಕಂ ನಾಗರಾಜ ಶ್ರೇಷ್ಠಿ ಚಾರಿಟಬಲ್ ಟ್ರಸ್ಟ್ ಹಾಗೂ ಬೆಂಗಳೂರು ಪಶ್ಚಿಮ ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.
ಆಸ್ಪತ್ರೆ ಉದ್ಘಾಟಿಸಿದ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಬೆಂಗಳೂರು ಲಯನ್ಸ್ ಆಸ್ಪತ್ರೆ ಗ್ರಾಮಾಂತರ ಭಾಗದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿರುವುದು ಸಂತೋಷದ ವಿಚಾರ. ಜತೆಯಲ್ಲಿ ಹುಣಸೂರಿನ ಮಾಕಂ ಕುಟುಂಬ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿ ಸ್ವಂತ ನಿವೇಶನದಲ್ಲಿ 70 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಿಸುವ ಮೂಲಕ ಮಾದರಿಯಾಗಿದೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತಾವು ಕಟಿಬದ್ಧರಾಗಿರುವುದಾಗಿ ತಿಳಿಸಿದರು.
ಗಾವಡಗೆರೆಯ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಸೇವೆ ಇಂದು ಫ್ಯಾಷನ್ ಆಗಿದೆ. ಆಧ್ಯಾತ್ಮಿಕತೆ ಕುರಿತ ಜಿಜ್ಞಾಸೆ ಯುವಕರನ್ನು ಆವರಿಸಿದೆ. ಹೃದಯದ ಕಣ್ಣನ್ನು ತೆರೆಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಮಾಕಂ ನಾಗರಾಜ ಶ್ರೇಷ್ಠಿಯವರ ಸಾಮಾಜಿಕ ಕೊಡುಗೆ ಅನನ್ಯವಾದದು ಎಂದರು ಅಭಿನಂದಿಸಿದರು.
ಶಾಸಕ ಸಿ.ಎಚ್. ವಿಜಯಶಂಕರ್, ಪ್ರೊ.ಟಿ.ಜೆ. ರಾಮಮೂರ್ತಿ, ಆಸ್ಪತ್ರೆಯ ಮುಖ್ಯಸ್ಥ ಡಾ. ಸತೀಶ್, ಉಪಾಧ್ಯಕ್ಷ ಚಿನ್ನಸ್ವಾಮಿಶೆಟ್ಟಿ, ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಎಚ್.ಎಸ್. ಅಶೋಕ್ ಕುಮಾರ್, ಸದಸ್ಯರಾದ ಹರೀಶ್ ಬಾಬು, ನಾಗರಾಜು, ರಾಜೇಶ್, ವಹಿದಾ ಬಾನು, ಸದಸ್ಯರಾದ ಎಸ್. ಶರವಣ, ಎಚ್.ಜೆ. ಕೃಷ್ಣರಾಜ ಗುಪ್ತ, ರಾಜಯೋಗಿ ಬಿ.ಕೆ. ಯೋಗಪ್ಪಣ್ಣ, ಪಾರ್ಥಸಾರಥಿ, ದ್ವಾರಕಾನಾಥ್, ಕಣ್ಣಿನ ವೈದ್ಯ ಡಾ. ಪ್ರವೀಣ್ ಇದ್ದರು.