ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಕ್ರಮ ಗಣಿಗಾರಿಕೆ- ಸ್ಫೋಟಕಗಳ ವಶ

Rashmi Kasaragodu
Updated On : 10 Jun 2014, 1:01 am

ಬೈಲಕುಪ್ಪೆ: ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಉಪ ತಹಸೀಲ್ದಾರ್ ಕೆ.ಎಸ್.ಕುಬೇರ ಭೇಟಿ ನೀಡಿ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ಸೀತೆ ಮಂಟಿಯ ಪಕ್ಕ ನಡೆದಿದೆ. ಇಲ್ಲಿಗೆ ಸಮೀಪದ ಬೆಟ್ಟದಪುರ ಹೋಬಳಿ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಉಪ ತಹಸೀಲ್ದಾರ್ ಕೆ. ಎಸ್. ಕುಬೇರ, ಗಣಿಗಾರಿಕೆಯ ಮೇಲೆ ದಾಳಿ ನಡೆಸಿದರು. ಈ ವೇಳೆ ಗಣಿಗಾರಿಕೆಗೆ ಬಳಸುವ ಸ್ಫೋಟಕದ ಸಿಡಿಮದ್ದು ಮತ್ತು ಬತ್ತಿಯನ್ನು ಸ್ಥಳದಲ್ಲಿ ಅಡಗಿಸಿಡಲಾಗಿತ್ತು. ಶೋಧನೆ ಮಾಡಿದಾಗ ಈ ಸ್ಫೋಟಕ ವಸ್ತುಗಳು ದೊರಕಿವೆ. ಇವುಗಳನ್ನು ಬೆಟ್ಟದಪುರದ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗೆ ಶೋಧ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement