ಕನ್ನಡ ನಾಡಿನ ವಿಶಿಷ್ಟ ಸಂಸ್ಕೃತಿ ಪ್ರೋತ್ಸಾಹಿಸಿ: ಸಿ.ಎಸ್. ರಾಮಲಿಂಗು
ಪಿರಿಯಾಪಟ್ಟಣ: ಕನ್ನಡ ನಾಡಿಗೆ ತನ್ನದೇ ಪರಂಪರೆ ಸಂಸ್ಕೃತಿಯ ಇತಿಹಾಸವಿದ್ದು, ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ರಾಮಲಿಂಗು ಹೇಳಿದರು. ಪಟ್ಟಣದ ರೋಟರಿ ಭವನದಲ್ಲಿ ತಾಲೂಕು ಕಸಾಪ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲರ ಸಂಸ್ಮರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಪಾದಕ ಕಂಪ್ಲಾಪುರ ಮೋಹನ್ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿದರು. ತಾ. ಕಸಾಪ ಅಧ್ಯಕ್ಷರಾದ ಗೊರಳ್ಳಿ ಜಗದೀಶ್ ಮಾತನಾಡಿದರು. ಇದೇ ವೇಳೆ ತಾಲೂಕಿನಲ್ಲಿ 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ರಾಮಲಿಂಗು ಅವರನ್ನು ಸನ್ಮಾನಿಸಲಾಯಿತು. ರೈತ ಮುಖಂಡ ಗುರುಮೂರ್ತಿ, ಕಾದಂಬರಿಕಾರ ಅಂಬ್ಲಾರೆ ಬಸವೇಗೌಡ, ಮಾಜಿ ಕಸಾಪ ಅಧ್ಯಕ್ಷೆ ಕೆ.ಆರ್. ಜಯಲಕ್ಷ್ಮಿ, ಗ್ರಾಮ ಘಟಕದ ಅಧ್ಯಕ್ಷರಾದ ಬಿ.ವಿ. ಅನಿತಾ, ಕೆ.ಜೆ. ರಾಜೀವ್, ಆರ್.ಎಸ್. ಮಹೇಶ್, ಜಿ.ಸಿ. ವಾಸುದೇವ್, ಕಗ್ಗುಂಡಿ ರಾಜು, ಸಿ.ಎನ್. ವಿಜಯ್, ನಾಗರಾಜ್, ನಾರಾಯಣಗೌಡ, ಎಸ್.ಸಿ. ಪರಮಶಿವಯ್ಯ, ಮುದ್ದಣ್ಣಚಾರ್ ಇದ್ದರು.