ದುಶ್ಚಟ ವಿಮುಕ್ತಿಗೆ ಚಿಕಿತ್ಸೆ ಆರಂಭ
ಮೈಸೂರು: ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಪ್ರೇರಣಾ ಆಸ್ಪತ್ರೆಯಲ್ಲಿ ಪ್ರೇರಣ ದುಶ್ಚಟ ವಿಮುಕ್ತಿ ಅಭಿಯಾನದ ಅಂಗವಾಗಿ ದುಶ್ಚಟಗಳ ವಿಮುಕ್ತಿಗೆ ಒಂದು ವರ್ಷಗಳ ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಜೂ.9 ರಿಂದ ಆ. 31 ರವರೆಗೆ ಈ ಅಭಿಯಾನ ನಡೆಯಲಿದ್ದು ಈ ವೇಳೆ ಹೆಸರು ನೋಂದಾಯಿಸಿಕೊಳ್ಳುವವರಿಗೆ ಒಂದು ವರ್ಷದ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ ಈ ಮೂರು ತಿಂಗಳು ರಿಯಾಯಿತಿ ಹಾಗೂ ಕೈಗೆಟುಕುವ ದರದಲ್ಲಿ ಒಳರೋಗಿ ಚಿಕಿತ್ಸೆಯನ್ನು ಅವಶ್ಯಕತೆ ಇರುವವರಿಗೆ ನೀಡಲಾಗುತ್ತದೆ ಎಂದು ಸ್ಥಾಪಕರಾದ ಡಾ.ಎಂ.ಎನ್. ದರ್ಶನ್, ಡಾ.ಎಚ್.ಆರ್. ಅಭಿಜಿತ್ ತಿಳಿಸಿದ್ದಾರೆ. ದೂ. 0821- 4006000, 4346000 ಸಂಪರ್ಕಿಸಬಹುದು.