ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯುತ್ ವ್ಯತ್ಯಯ ನಾಳೆ

Rashmi Kasaragodu
Updated On : 10 Jun 2014, 1:01 am

ಮೈಸೂರು: ಬೋಗಾದಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಈ ಕೆಳಕಂಡ ಪ್ರದೇಶಗಳಿಗೆ ಜೂ. 11ರ ಬೆಳಗ್ಗೆ 9.30 ರಿಂದ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ವಿ.ವಿ. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು. ಜನತಾನಗರ, ಬೋಗಾದಿ 2ನೇ ಹಂತ ನಾರ್ತ್ ಮತ್ತು ಸೌತ್, ಗಂಗೋತ್ರಿ ಕ್ಯಾಂಪಸ್, ಗಂಗೋತ್ರಿ ಕ್ವಾಟ್ರಸ್, ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ, ಕೇರ್ಗಳ್ಳಿ, ರೂಪನಗರ, ದೀಪಾನಗರ, ಬೋಗಾದಿ ಗ್ರಾಮ, ವಿಜಯನಗರ 3ನೇ ಹಂತ, ಇನಕಲ್, ವಿಜನಗರ 4ನೇ ಹಂತ 1ನೇ ಫೇಸ್, ವಿಜಯಶ್ರೀಪುರ, ಸುಧಾ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.


ಜೆಎಸ್ಎಸ್ ಕಾಲೇಜಿನ ಫಲಿತಾಂಶ ಪ್ರಕಟ
ಮೈಸೂರು: ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ನಡೆಸಿದ ಏಪ್ರಿಲ್ ಮೇಜ್ಞಾ 2014ರ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ. ಮತ್ತು ಬಿ.ಸಿ.ಎ. ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಢಿಢಿಢಿ.ಞಡಡ್ಛಛ್ಛಡ.ಜಜ್ಡ.್ಝಟಿ ಮತ್ತು ಢಿಢಿಢಿ.್ಠಜಡ್ಡಟಡಿ.ಞಡಡ್ಛಛ್ಛಡ.ಜಜ್ಡ.್ಝಟಿ ವೆಬ್ಸೈಟ್ನಲ್ಲಿ ಪಡೆಯಬಹುದು ಎಂದು ಪ್ರಾಂಶುಪಾಲ ಪ್ರೊ.ಎಂ.ಬಿ. ಮಲ್ಲಿಕಾರ್ಜುನ ಪಂಡಿತ್ ತಿಳಿಸಿದ್ದಾರೆ.
ಮಹಿಳಾ ಕಾಲೇಜಿಗೆ ಪ್ರವೇಶ: ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ವಿಜ್ಞಾನ ವಿಭಾಗದ ಬಿ.ಎಸ್ಸಿನಲ್ಲಿ, ಕಲಾ ವಿಭಾಗದ ಬಿ.ಎ. ಹಾಗೂ ವಾಣಿಜ್ಯ ಪ್ರವೇಶ ಲಭ್ಯವಿದ್ದು, ಆಸಕ್ತರು ಪ್ರವೇಶಾತಿ ಪಡೆಯಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement