ಹನಗೋಡು- ಪಂಚವಳ್ಳಿ ರಸ್ತೆ ಕಾಮಗಾರಿಗೆ ಚಾಲನೆ
ಹುಣಸೂರು: ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ನೆನೆಗುದಿಗೆ ಬಿದ್ದಿದ್ದ ಹನಗೋಡು- ಪಂಚವಳ್ಳಿ ಮುಖ್ಯರಸ್ತೆಯ 90 ಲಕ್ಷ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಪಿ. ಮಂಜುನಾಥ್ ಸೋಮವಾರ ಚಾಲನೆ ನೀಡಿದರು. ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರ ಸಾರಿಗೆ ಸಂಪರ್ಕ ಉತ್ತಮಗೊಳಿಸುವ, ಸಮಯ ಮತ್ತು ಇಂಧನ ಉಳಿತಾಯವಾಗುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಿ ರಸ್ತೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ರೈತಾಪಿ ವರ್ಗದ ಜನತೆ ರಸ್ತೆ ನಿರ್ಮಾಣದ ನಂತರ ಅಗೆದು ಹಾಳು ಮಾಡುವ ಬದಲಾಗಿ ನಿರ್ಮಾಣ ಹಂತದಲ್ಲೇ ಬೋರ್ವೆಲ್ಗಳ ಪೈಪ್ಗಳ ಅಳವಡಿಸಿಕೊಂಡಲ್ಲಿ ರಸ್ತೆ ದುರಸ್ತಿಗೆ ತಲುಪುವುದನ್ನು ಹಾಗೂ ಕಾಮಗಾರಿ ನಡೆಯುವಾಗ ಜನರು ಒತ್ತುವರಿ ತೆರವುಗೊಳಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಎಂಜಿನಿಯರ್ ಕೆ. ಕುಮಾರ್, ಎಇಇ ವಾಸುದೇವನ್, ಜೆಇ ಅನಿಬ್, ರಾಜಯ್ಯ, ಪಿಡಿಒ ಡಾ. ಆಶಾ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಕರ್ಣಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ರಾಮೇಗೌಡ, ಮುಖಂಡರಾದ ಪ್ರಭಾಕರ ಹೆಗ್ಡೆ, ರವಿಕುಮಾರ್, ಮಹೇಶ್, ಗವಿಮಾದು, ರಾಮೇಗೌಡ, ಮಾದೇಗೌಡ, ಶಿವಕುಮಾರ್, ರಾಜೇಗೌಡ ಇದ್ದರು.