ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪರಿಸರ ದಿನಾಚರಣೆ ಸಮಾರೋಪ ಇಂದು

Rashmi Kasaragodu
Updated On : 11 Jun 2014, 2:12 am

ಮೈಸೂರು: ಒಡಿಪಿ ಸಂಸ್ಥೆಯು ಆಯೋಜಿಸಿರುವ ವಿಶ್ವ ಪರಿಸರ ದಿನಾಚರಣೆಯ ಸಮಾರೋಪ ಸಮಾರಂಭವು ಜೂ. 11 ರಂದು ಬೆಳಗ್ಗೆ 11ಕ್ಕೆ ಬನ್ನಿಮಂಟಪದಲ್ಲಿರುವ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.  ಅರಣ್ಯ ಹಾಗೂ ಪರಿಸರ ಖಾತೆಯ ಸಚಿವ ರಮಾನಾಥ್ ರೈ ಕಾರ್ಯಕ್ರಮ ಉದ್ಘಾಟಿಸುವರು. ಬಿಷಪ್ ಥಾಮಸ್ ಅಂತೋಣಿ ಪಾಳಪಿಳ್ಳಿ ಅಧ್ಯಕ್ಷತೆ ವಹಿಸುವರು ಎಂದು ಸಂಸ್ಥೆ ನಿರ್ದೇಶಕ ಫಾ. ಸ್ಟ್ಯಾನ್ಲಿ ಅಲ್ಮೆಡಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಉಪಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಳನ್ ಮುಖ್ಯ ಭಾಷಣ ಮಾಡುವರು. ಸಹಾಯಕ ಅರಣ್ಯಾಧಿಕಾರಿ ಬಸವರಾಜು ಉಪಸ್ಥಿತರಿರುವರು ಎಂದು ಅವರು ಹೇಳಿದರು.
ಜೂ. 5 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪರಿಸರ ಸಂರಕ್ಷಣೆ ಅಭಿಯಾನ ನಡೆಸಲಾಯಿತು ಎಂದರು.  ಪ್ರಸ್ತುತ ದಿನಗಳಲ್ಲಿ ಏರುತ್ತಿರುವ ತಾಪಮಾನದಿಂದ ಎದುರಾಗುವ ಅನಾಹುತಗಳ ಬಗ್ಗೆ ಜನರಲ್ಲಿ ಮನವರಿಕೆ ಮತ್ತು ಸುಧಾರಣೆ ತಂದು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ರೂಪಿಸುವ ದಿಕ್ಕಿನಲ್ಲಿ ಸಸಿ ನೆಡುವುದು ಹಾಗೂ ಸಸಿ ವಿತರಿಸುವ  ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement