ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಾರ್ಡ್ ನಂ. 3, 4ರಲ್ಲಿ ಪಾದಯಾತ್ರೆ ಮೂಲಕ ಸಮಸ್ಯೆ ಆಲಿಸಿದ ಮೇಯರ್

Rashmi Kasaragodu
Updated On : 11 Jun 2014, 2:12 am

ಮೈಸೂರು: ನಗರ ಪಾಲಿಕೆ ಮೇಯರ್ ಎನ್.ಎಂ. ರಾಜೇಶ್ವರಿ ಅವರು ಮಂಗಳವಾರ ವಾರ್ಡ್ ನಂ. 3 ಮತ್ತು 4 ರಲ್ಲಿ ಪಾದಯಾತ್ರೆ ನಡೆಸಿ ಸ್ಥಳೀಯರಿಂದ ಸಮಸ್ಯೆಗಳನ್ನು ಪರಿಶೀಲಿಸಿದರು.
ಸೋಮವಾರ ವಾರ್ಡ್ ನಂ. 1 ಮತ್ತು 2ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಕೈಗೊಂಡಿದ್ದ ರಾಜೇಶ್ವರಿ ಅವರು ಮಂಗಳವಾರ ವಾರ್ಡ್ ನಂ. 3ರ ವ್ಯಾಪ್ತಿಯ ಬಸವೇಶ್ವರ ರಸ್ತೆ, ಲಕ್ಷ್ಮೀಪುರಂಗೆ ತೆರಳಿ ಪರಿಶೀಲಿಸಿದರೆ, ವಾರ್ಡ್ ನಂ. 4ರ ವ್ಯಾಪ್ತಿಯ ರಾಮಾನುಜ ರಸ್ತೆ, ಮಧುವನ, ಬಂಡಿಕೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಧುವನ ಮತ್ತು ಬಂಡಿಕೇರಿ ವ್ಯಾಪ್ತಿಯಲ್ಲಿನ ಮಳೆ ನೀರು ಚರಂಡಿಯ ಅವ್ಯವಸ್ಥೆ ಮತ್ತು ಒಳಚರಂಡಿ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದರು. ಅಲ್ಲದೆ ಮಧುವನ ರಸ್ತೆಯ ಡಾಂಬರೀಕರಣ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದರು. ರಾಮಾನುಜ ರಸ್ತೆಯ ಡಾಂಬರೀಕರಣ ಕುರಿತು ಸದಸ್ಯ ಸುನಿಲ್ ಕುಮಾರ್ ಜೊತೆ ಚರ್ಚಿಸಿದರು. ನಂತರ ಬಸವೇಶ್ವರ ರಸ್ತೆಯಲ್ಲಿನ ಒಳ ಚರಂಡಿ ವ್ಯವಸ್ಥೆ, ಡಾಂಬರೀಕರಣದ ಕುರಿತು ಸಾಕಷ್ಟು ದೂರುಗಳು ಕೇಳಿಬಂತು. ಪಾಲಿಕೆ ಸದಸ್ಯೆ ಸಮೀನಾ ಅವರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ವ್ಯಾಪಕವಾಗಿದೆ. ಈಗ ಇರುವ ಕಸ ಸಾಗಿಸುವ ವಾಹನದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಹೆಚ್ಚುವರಿಯಾಗಿ ಮತ್ತೊಂದು ಕಸ ಸಾಗಿಸುವ ವಾಹನವನ್ನು ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೆ ಸಾರ್ವಜನಿಕರೂ ಸಹ ಕಸವನ್ನು ಎಲ್ಲೆಂದರಲ್ಲಿ ಬೀಸಾಡದಂತೆ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement