ಚಿಕಿತ್ಸೆಗೆ ನೆರವಾಗುವಿರಾ?
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕು ಕಂಠಾಪುರ ಗ್ರಾಮದ ಜಾನಪದ ಸಂಶೋಧಕಿ ತುಳಸಿದೇವಿ ಹಾಗೂ ಇತಿಹಾಸ ಸಂಶೋಧಕ ಅರವಿಂದ ಆರ್ಯ ಅವರು ವೈದ್ಯಕೀಯ ಚಿಕಿತ್ಸೆಗಾಗಿ ದಾನಿಗಳಿಂದ ನೆರವು ಕೋರಿದ್ದಾರೆ.
ಕೊಡಗಿನ ತುಳಸಿದೇವಿ ಅವರು ತೀವ್ರ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯರು ನೀಡಿರುವ ಸಲಹೆ ಮೇರೆಗೆ ಮನೆಯಲ್ಲಿ ವಿದ್ಯುತ್ ಚಾಲಿತ ಆಕ್ಸಿಜನ್ ಯಂತ್ರದ ಮೂಲಕ ಕೃತಕ ಉಸಿರಾಟ ನಡೆಸುತ್ತಿದ್ದಾರೆ. ಕಂಠಾಪುರ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಅನಿಯಮಿತವಾಗಿ ತೊಂದರೆಯಾದ್ದರಿಂದ ಇದೀಗ ನಿತ್ಯ ಆಕ್ಸಿಜನ್- ಸಿಲಿಂಡರ್ ಮೂಲಕ ಆಕ್ಸಿಜನ್ ಒದಗಿಸಲಾಗುತ್ತಿದೆ. ಇನ್ನು ಅರವಿಂದ ಆರ್ಯ ಅವರು ಎರಡೂ ಬದಿಯ ಹರ್ನಿಯಾ ಹಾಗೂ ಪ್ರೊರ್ಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆ ಅವಶ್ಯವೆಂದು ವೈದ್ಯರು ಸೂಚಿಸಿದ್ದಾರೆ. ನಾನು ಮತ್ತು ನನ್ನ ಪತ್ನಿ ಇಬ್ಬರೂ ವಯೋವೃದ್ಧರಾಗಿದ್ದು ನಮಗೆ ಯಾವುದೇ ಆದಾಯವಿಲ್ಲ. ರಾಜ್ಯ ಸರ್ಕಾರದಿಂದ ಯಾವುದೇ ಸವಲತ್ತು ಒದಗಿಲ್ಲ. ಜೀವನ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಕೊಡುಗೈ ದಾನಿಗಳು ನಮಗೆ ಆರ್ಥಿಕ ಸಹಾಯ ಮಾಡಿದರೆ ಜೀವನ ಕಟ್ಟಿಕೊಟ್ಟಂತಾಗುತ್ತದೆ ಎಂದು ದಂಪತಿ ಕೋರಿದ್ದಾರೆ.
ವಿಳಾಸ: ಅರವಿಂದ ಆರ್ಯ, ಇತಿಹಾಸ ಸಂಶೋಧಕ, ಕಂಠಾಪುರ ಗ್ರಾಮ, ಪಿರಿಯಾಪಟ್ಟಣ ತಾಲೂಕು, ಮೈಸೂರು- 571107. ಕೆನರಾ ಬ್ಯಾಂಕ್ ಪಿರಿಯಾಪಟ್ಟಣ ಶಾಖೆ, ಖಾತೆ ನಂ.4793101000418 ಇಲ್ಲಿಗೆ ಹಣ ಪಾವತಿಸಬಹುದು. ಮೊ. 81056 67262 ಸಂಪರ್ಕಿಸಬಹುದು.