ನಾಳೆ ನಾಲ್ವಡಿ ಕೃಷ್ಣರಾಜರ ವರ್ಧಂತಿ
ಮೈಸೂರು: ಪಾತಿ ಫೌಂಡೇಷನ್ ವತಿಯಿಂದ ಜೂ. 14ರ ಸಂಜೆ 5ಕ್ಕೆ ಜಗನ್ಮೋಹನ ಅರಮನೆಯಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 130ನೇ ವರ್ಧಂತಿ ಆಯೋಜಿಸಿದೆ. ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆ ವಹಿಸಲಿದ್ದು, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಮಕ್ಕಳ ತಜ್ಞ ಡಾ. ವಾಮನರಾವ್ ಬಾಪಟ್, ಆರ್ಎಸ್ಎಸ್ ಸಂಚಾಲಕ ವೆಂಕಟರಾಮ್, ಮಧುಮೇಹ ತಜ್ಞ ಡಾ. ಲಕ್ಷ್ಮೀನಾರಾಯಣ, ಮ್ಯಾಂಡೋಲಿನ್ ವಾದಕ ಜಾನಕಿರಾಂ ರಾಜು, ಗಾಯಕ ವಸಂತ ವೆಂಕಟೇಶ್ ಅವರನ್ನು ಸನ್ಮಾನಿಸಲಾಗುವುದು ಎಂದು ಫೌಂಡೇಷನ್ನ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.