ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಲಿ

Rashmi Kasaragodu
Updated On : 13 Jun 2014, 2:04 am

.ಆರ್. ನಗರ: ಸಹಕಾರ ಸಂಘಗಳ ಮೂಲಕ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಮೈಸೂರು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಅಮಿತ್ ವಿ.ದೇವರಹಟ್ಟಿ ಹೇಳಿದರು.
ಸಮೀಪದ ಹರದನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಟ್ರ್ಯಾಕ್ಟರ್ ಮತ್ತು ಐಪಿ ಸೆಟ್ ಸಾಲ ವಿತರಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಿಂದ ಯಾವುದೇ ಯೋಜನೆ ಅಡಿಯಲ್ಲಿ ಸಾಲ ಪಡೆದವರು ಅದನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಕೆ.ಆರ್. ನಗರ ತಾಲೂಕಿನಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘದ ಮತ್ತಷ್ಟು ಬೆಳವಣಿಗೆಗೆ ಜಿಲ್ಲಾ ಸಂಘದ ವತಿಯಿಂದ ಸಿಗಬೇಕಾದ ಎಲ್ಲಾ ನೆರವುಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ ಅವರು ತಾಲೂಕಿನಲ್ಲಿರುವ ಸಹಕಾರ ಸಂಘಗಳ ಆರ್ಥಿಕ ಬೆಳವಣಿಗೆಗೆ ನಮ್ಮ ಆಡಳಿತಾವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.  ಇದೇ ವೇಳೆ 6 ಜನರಿಗೆ 30.79 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಸಾಲದ ಚೆಕ್ ಹಾಗೂ 8 ಜನರಿಗೆ 9 ಲಕ್ಷ ಮೌಲ್ಯದ ಐಪಿ ಸೆಟ್ ಸಾಲದ ಚೆಕ್ ವಿತರಿಸಲಾಯಿತು. ಸಂಘದ ಅಧ್ಯಕ್ಷ ಟಿ.ರಾಮೇಗೌಡ, ನಿರ್ದೇಶಕರಾದ ಬಿ.ಆರ್.ಶ್ರೀಧರ್, ಕೆ.ಬಿ. ನಟರಾಜ್, ಸ್ವಾಮಿಗೌಡ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement