ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಬೇಡ್ಕರ್‌ಗೆ ಅಪಮಾನ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 15 Jun 2014, 1:03 am

ಪಿರಿಯಾಪಟ್ಟಣ: ರಾಯಚೂರು ಜಿಲ್ಲೆ ಮಾನ್ವಿಯ ಜಾನೆಕಲ್‌ನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕು ದಸಂಸ ಘಟಕದ ಕಾರ್ಯಕರ್ತರು ಗ್ರೇಡ್-2 ತಹಸೀಲ್ದಾರ್ ಎಚ್.ಜಿ. ಇಂದಿರಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು. ದಸಂಸ ನಗರ ಘಟಕದ ಸಂಚಾಲಕ ಎಚ್.ಕೆ.ಮಹೇಶ್ ಮಾತನಾಡಿ, ವಿಶ್ವದಲ್ಲಿಯೇ ಸಮಾನತೆಯನ್ನಾಧರಿಸಿ ಜಾತ್ಯತೀತ ಪರಿಕಲ್ಪನೆಯ ಮೂಲಕ ಭಾರತಕ್ಕೆ ಸಂವಿಧಾನ ರಚಿಸಿದ ರಾಷ್ಟ್ರನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕುವ ಮೂಲಕ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ. ಈ ಕೃತ್ಯದಿಂದಾಗಿ ಸಮಾಜದಲ್ಲಿ ಅಶಾಂತಿ ಉಂಟಾಗಿ ದಲಿತ ಸಮುದಾಯದವರಿಗೆ ಅಪಮಾನ ಮಾಡುವ ಘಟನೆ ಇದಾಗಿದೆ ಎಂದರು. ಇದರಿಂದಾಗಿ ರಾಷ್ಟ್ರ ನಾಯಕರಿಗೆ ಗೌರವ ದೊರೆಯದಂತಾಗಿದೆ. ಇದು ಸಮಾಜದಲ್ಲಿ ಅಸಮಾನತೆ, ದಬ್ಬಾಳಿಕೆ, ಶೋಷಣೆಯ ಪ್ರತೀಕವಾಗಿದ್ದು ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಘಟನೆಯು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement