ಅರಣ್ಯಾಧಿಕಾರಿ ಮುನಿರಾಜು ವಿರುದ್ಧದ ಆರೋಪ ಸುಳ್ಳು
ಎಚ್.ಡಿ. ಕೋಟೆ: ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮೇಟಿಕುಪ್ಪೆ ವಲಯದಲ್ಲಿ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮುನಿರಾಜು ಉತ್ತಮ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಇಲಾಖೆ ಸಿಬ್ಬಂದಿ ನಾರಾಯಣ್ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಮೇಟಿಕುಪ್ಪೆ ಸುತ್ತಮುತ್ತಲಿನ ರೈತರು, ಇಡಿಸಿ ಅಧ್ಯಕ್ಷರು ತಿಳಿಸಿದರು. ವಲಯ ಅರಣ್ಯಾಧಿಕಾರಿ ಮುನಿರಾಜು ಅಧಿಕಾರ ವಹಿಸಿಕೊಂಡ ಬಳಿಕ ಈ ಭಾಗದ ರೈತರು ನೆಮ್ಮದಿಯಿಂದ ಜೀವನ ಸಾಗಿಸುವಂತಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಿದೆ. ಆದರೆ ಮುನಿರಾಜು ಬಂದ ಬಳಿಕ ರೈತರ ಜಮೀನಿಗೆ ಬರುತ್ತಿದ್ದ ಆನೆ, ಚಿರತೆ, ಹಂದಿಗಳಿಂದ ಆಗುತ್ತಿದ್ದ ಹಾನಿ ತಪ್ಪಿಸಿ, ರೈತರು ನೆಮ್ಮದಿಯಿಂದ ನಿದ್ರಿಸುವಂತಾಗಿದೆ ಎಂದರು. ಅರಣ್ಯದಂಚಿನ ಗ್ರಾಮದ ರೈತರು ಇಲಾಖೆ ಅವರನ್ನು ಕಂಡರೆ ಭಯ ಪಡುತ್ತಿದ್ದಾರೆ. ರೈತರ ಸಂಪೂರ್ಣ ಸಹಕಾರದೊಂದಿಗೆ ಅಭಿವೃದ್ಧಿಯತ್ತ ಗಮನ ನೀಡಬೇಕು ಎಂದರು.