ಎಡಿಜಿಪಿ ಅಗರವಾಲ್ ಮೊಬೈಲ್ ಕಳವು
ಮೈಸೂರು: ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಪೊಲೀಸ್ ಆಡಳಿತ ವಿಭಾಗದ ಎಡಿಜಿಪಿ ಸುನಿಲ್ ಅಗರವಾಲ್ ಅವರ ದುಬಾರಿ ಬೆಲೆಯ ಮೊಬೈಲ್ ಫೋನ್ ಅನ್ನೇ ಖದೀಮನೊಬ್ಬ ಅಪಹರಿಸಿರುವ ಘಟನೆ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ನಡೆದಿದೆ. ಶುಕ್ರವಾರ ಕುಟುಂಬ ಸಮೇತ ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ಸುನಿಲ್ ಅಗರವಾಲ್ ಅವರು ಮಫ್ತಿಯಲ್ಲಿ ಇದ್ದುದ್ದರಿಂದ ಪೊಲೀಸ್ ಅಧಿಕಾರಿ ಎಂಬುದು ಇತರರಿಗೆ ತಿಳಿದಿರಲಿಲ್ಲ. ಸಂಜೆ ವೇಳೆ ದೇವಾಲಯದಲ್ಲಿ ದೇವಿಯ ದರ್ಶನ ಪಡೆದು ಹಿಂದಿರುಗುವಾಗ ಮೊಬೈಲ್ ಫೋನ್ ಕಳೆದಿರುವುದು ಅವರ ಗಮನಕ್ಕೆ ಬಂದಿದೆ. ರು. 40 ಸಾವಿರ ಬೆಲೆಯ ಸ್ಮಾರ್ಟ್ ಫೋನ್ ಅನ್ನು ಯಾರೋ ಎಗರಿಸಿದ್ದಾರೆ. ಈ ಬಗ್ಗೆ ಅವರು ಕೆ.ಆರ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.